ಹುಬ್ಬಳ್ಳಿ: ಚೀಟಿ ಬರೆದಿಟ್ಟು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ನಗರದ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ದೇವಾಂಗಪೇಟ ಕೊನೆಯ ಬಸ್ ಸ್ಟಾಪ್ ಬಳಿಯ ನಿವಾಸಿ ಗಿರೀಶ ನರಿಯವರ ( 28 ) ಎಂಬಾತನೇ ನಾಪತ್ತೆಯಾದವನಾಗಿದ್ದಾನೆ. ಚೀಟಿಯಲ್ಲಿ ನನ್ನ ಸಾವಿಗೆ ಬಡ್ಡಿ ವ್ಯವಹಾರವೇ ಕಾರಣ ಸಾರಿ ಅಪ್ಪಾಜಿ ಎಂದು ಬರೆದಿಟ್ಟು ಹೋಗಿದ್ದಾನೆ. ಕಡಿಮೆ ಬಡ್ಡಿಗೆ ಬೇರೆಯವರಿಂದ ಹಣ ತೆಗೆದುಕೊಂಡು ಜಾಸ್ತಿ ಬಡ್ಡಿಗೆ ಕೊಡುತ್ತಿದ್ದೆ ಕೆಲವರು ನನಗೆ ಹಣ ಮರಳಿಸಿಲ್ಲ ಲಾಕ್ ಡೌನ್ ವೇಳೆ ಕೊಟ್ಟವರು ಮರಳಿ ಬರಲಿಲ್ಲ ಅಂತಾ ಚೀಟಿಯಲ್ಲಿ ಬರೆದಿಟ್ಟಿದ್ದನ್ನು ವಾಟ್ಸಪ್ ಮೆಸೇಜ್ ಮಾಡಿ ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದಾನೆ ಎಂದು ಆತನ ಪತ್ನಿ ಸ್ನೇಹಾ ದೂರಿನಲ್ಲಿ ತಿಳಿಸಿದ್ದಾರೆ.
ಚಿತ್ರದಲ್ಲಿ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಅಶೋಕನಗರ ಪೊಲೀಸ್ ಠಾಣೆ ( 0836-2233490 / 9480802038 ) ಅಥವಾ ಸಿಟಿ ಕಂಟ್ರೋಲ್ ರೂಂ ( 0836-2233555 / 100 ) ಗೆ ಸಂಪರ್ಕಿಸಲು ಕೋರಲಾಗಿದೆ.
Kshetra Samachara
22/06/2022 03:15 pm