ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಕುವಿನಿಂದ ಇರಿತ: ನಾಲ್ವರ ವಶಕ್ಕೆ, ಮುಂದುವರಿದ ವಿಚಾರಣೆ

‌ಹುಬ್ಬಳ್ಳಿ: ಸಿಗರೇಟ್ ವಿಚಾರಕ್ಕೆ ನಡೆದ ಜಗಳದಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದ ಆರೋಪಿಗಳಾದ ರಫೀಕ್, ಅಲ್ತಾಫ, ಅಸ್ಲಾಂ ಹಾಗೂ ಮಹಮ್ಮದ ಅಲಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಜೂನ್ 14ರಂದು ಆನಂದ ನಗರದ ವೆಲ್ಕಮ್ ಹಾಲ್ ಬಳಿ ಸಿಗರೇಟ್ ಸೇದುವ ವಿಚಾರಕ್ಕೆ ಸಂಬಂಧಿಸಿದಂತೆ, ಜಿಲಾನಿ ಶೇಖ್ ಮತ್ತು ಜಾವಿದ್ ಶೇಖ್ ಅವರೊಂದಿಗೆ ಜಗಳವಾಡಿದ್ದರು. ನಂತರ, ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಇತ್ತೀಚೆಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ, ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

22/06/2022 12:18 pm

Cinque Terre

29.84 K

Cinque Terre

1

ಸಂಬಂಧಿತ ಸುದ್ದಿ