ಹುಬ್ಬಳ್ಳಿ: ಆನ್ಲೈನ್ ಮಾರ್ಕೆಟಿಂಗ್ ಆ್ಯಪ್‌ನಲ್ಲಿ 12.50 ಲಾಟರಿ ಹತ್ತಿದೆ ಎಂದು ನಂಬಿಸಿ ವ್ಯಕ್ತಿ ಯೊಬ್ಬರ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 1.41 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ಹಣ ವಂಚಿಸಿದ ಘಟನೆ ನಡೆದಿದೆ.
ನಗರದ ವಿದ್ಯಾನಗರದ ಆದರ್ಶ ಪಾಂಡೆ ಎಂಬುವರೇ ವಂಚನೆಗೊಳಗಾದವರು, ಮೆಸೋ ಆಪ್‌ನಲ್ಲಿ ಹಾಕಿದ ವಿಳಾಸದ ಮಾಹಿತಿ ಸಂಗ್ರಹಿಸಿದ ವಂಚಕರು ಲಾಟರಿ ಹತ್ತಿದೆ ಎಂದು ಸ್ಕ್ಯಾಚ್ ಕಾರ್ಡ್ ಪೋಸ್ಟ್ ಮೂಲಕ ಕಳುಹಿಸಿ ನಂಬಿಸಿದ್ದಾರೆ.
ಬಳಿಕ ವಿವಿಧ ಕಾರಣ ಹೇಳಿ ಹಂತ ಹಂತವಾಗಿ ಹಣ ವರ್ಗಾಯಿ ಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/06/2022 01:50 pm