ವರದಿ: ಉದಯ ಗೌಡರ
ಕಲಘಟಗಿ: ಹೌದು ಕಲಘಟಗಿ ತಾಲೂಕಿನಲ್ಲಿ ಕೋಚಿಂಗ್ ಸೆಂಟರ್ ಗಳು ತಲೆ ಎತ್ತಿದ್ದು ತಾಲೂಕಿನಲ್ಲಿ ಸುಮಾರು 6 ಕೋಚಿಂಗ್ ಕ್ಲಾಸ್ ಗಳು ಪ್ರಾರಂಭವಾಗಿದೆ.
ನವೋದಯ ಸೈನಿಕ ಮುರಾರ್ಜಿ ಆದರ್ಶ ಕಿತ್ತೂರು ರಾಣಿ ಚನ್ನಮ್ಮ ಅಳ್ವಾಸ ವಸತಿ ಶಾಲೆಗಳ ಪೂರ್ವ ಪರೀಕ್ಷೆ ತರಬೇತಿ ಹೆಸರಿನಲ್ಲಿ ಈ ಸೆಂಟರ್ ಗಳು ಪ್ರಾರಂಭ ಮಾಡಿದ್ದಾರೆ.
ಇಲ್ಲಿಗೆ ಬರುವ ಮಕ್ಕಳು ಹೆಸರಿಗೆ ಮಾತ್ರ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಅಡ್ಮಿಷನ್ ಮಾಡಿಸಿ ವರ್ಷ ಪೂರ್ತಿ ಈ ಕೋಚಿಂಗ್ ಸೆಂಟರ್ ಗಳಲ್ಲಿ ಪಾಠ ಕಲಿಯುತ್ತಿದ್ದಾರೆ.
ಮಕ್ಕಳು ಶಾಲೆಯಲ್ಲು ಹಾಜರಾತಿ ಇರುತ್ತದೆ ಹಾಗೂ ಕೋಚಿಂಗ್ ಸೆಂಟರ್ ಗಳಲ್ಲು ಹಾಜರಾತಿ ಇರುತ್ತದೆ. ಈ ಒಂದು ಕೋಚಿಂಗ್ ಸೆಂಟರ್ ಗಳು ಯಾವದೆ ರೀತಿಯಾದ ಅನುಮತಿ ಪಡೆಯದೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ನಿನ್ನೆ ಶಿಕ್ಷಣ ಇಲಾಖೆ ಮತ್ತು ಧಾರವಾಡ ಮಕ್ಕಳ ಆಯೋಗ ಅದಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು ಕೂಡಿಕೊಂಡು ಅನಧಿಕೃತವಾಗಿ ನಡೆಸುತ್ತಿರುವ ಇಂತಹ ಕೋಚಿಂಗ್ ಸೆಂಟರ್ ಗಳಿಗೆ ಬೇಟಿನಿಡಿ ಬಂದ್ ಮಾಡಿಸಿದರು.
ಈ ಒಂದು ಸಮಸ್ಯ ಕೇವಲ ಒಂದು ತಾಲೂಕಿಗೆ ಸಿಮಿತ ವಲ್ಲದೆ ಧಾರವಾಡ ಜಿಲ್ಲೆಯ ತುಂಬ ಈ ರೀತಿಯಾದ ಬಹುತೇಕ ಕೋಚಿಂಗ್ ಸೆಂಟರ್ ಗಳು ತಲೆ ಎತ್ತಿದ್ದು ಅಧಿಕಾರಿಗಳು ಅಂತಹ ಅನಧಿಕೃತ ಕೋಚಿಂಗ್ ಸೆಂಟರಗಳ ಮೇಲೆ ಕ್ರಮ ಕೈಗೋಳ್ಳಬೇಕಾಗಿದೆ.
Kshetra Samachara
18/06/2022 10:41 am