ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ; ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಧಿಡೀರ್ ಪ್ರತ್ಯಕ್ಷವಾದ ಮಗು!

ಹುಬ್ಬಳ್ಳಿ; ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಿಮ್ಸ್ ಆವರಣದಲ್ಲಿಯೇ ಮಗು ಧಿಡೀರ್ ಪ್ರತ್ಯಕ್ಷವಾಗಿದೆ.

ಹೌದು.ನಾಪತ್ತೆಯಾಗಿದ್ದ ಮಗು ಕಿಮ್ಸ್ ನಲ್ಲಿಯೇ ಪತ್ತೆಯಾಗಿದ್ದು, ಈ ಕುರಿತು ಮೂರು ತಂಡ ರಚಿಸುವ ಮೂಲಕ ಮಗು ಪತ್ತೆಗೆ ಜಾಲ ಬೀಸಿದ್ದ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡ ಬೆನ್ನಲ್ಲೇ ಭಯಗೊಂಡ ಆರೋಪಿತರು ರಾತ್ರೋರಾತ್ರಿ ಮಗುವನ್ನು ಕಿಮ್ಸ್ ಆವರಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಇನ್ನೂ ಮಗುವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆಯ ನಂತರವಷ್ಟೇ ಮಗು ಎಲ್ಲಿತ್ತು ಯಾರು ಕಳ್ಳತನ ಮಾಡಿದ್ದು ಎನ್ನುವ ಮಾಹಿತಿ ಬೆಳಕಿಗೆ ಬರಬೇಕಿದೆ.

Edited By :
Kshetra Samachara

Kshetra Samachara

14/06/2022 10:47 am

Cinque Terre

21.95 K

Cinque Terre

0

ಸಂಬಂಧಿತ ಸುದ್ದಿ