ಹುಬ್ಬಳ್ಳಿ: ಕಳ್ಳನೊಬ್ಬ ಬಸ್ಸಿನಲ್ಲಿ ಹತ್ತುತ್ತಿದ್ದ ಪ್ರಯಾಣಿಕನೊಬ್ಬನ 30 ಸಾವಿರ ಮೌಲ್ಯದ ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದಾನೆ.
ನವಲಗುಂದ ತಾಲೂಕಿನ ಆನಂದ ಕೊಹ್ಲಿವಾಡ ಎಂಬುವರ ಮೊಬೈಲ ಕಳ್ಳತನವಾಗಿದೆ. ನಗರದ ತಾಡಪತಿಗಲ್ಲಿ ಕ್ರಾಸ್ ಹತ್ತಿರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗು ಒನ್ ಪ್ಲಸ್ ಕಂಪನಿ ಮೊಬೈಲ್ ಕಳ್ಳತನ ಮಾಡಲಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/06/2022 12:34 pm