ಹುಬ್ಬಳ್ಳಿ : OLXನಲ್ಲಿ ಖರೀದಿಸಿದ ಸಾಮಗ್ರಿ ಹಣವನ್ನು ಆನ್ಲೈನ್ ಪೇಮೆಂಟ್ ಮಾಡುತ್ತೇನೆಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿ ಹಂತ ಹಂತವಾಗಿ ಸುಮಾರು 1.59 ಲಕ್ಷ ರೂ, ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ನಡೆದಿದೆ.
ಕೇಶ್ವಾಪುರದ ಸೈಯದ್ ಹಾಪೀಜ್ ವಂಚನೆಗೊಳಗಾದವರು ಸೈಯದ್ ಅವರು ಒ ಎಲ್ ಎಕ್ಸ್ ನಲ್ಲಿ ಹಳೇ ಸೋಫಾ ಸೆಟ್ ಮಾರಾಟ ಮಾಡಲು ಫೋಟೋ ಹಾಗೂ ಫೋನ್ ನಂಬರ ಹಾಕಿದ್ದರು. ಇದನ್ನು ಖರೀದಿಸುವ ನೆಪದಲ್ಲಿ ಫೋನ್ ಮಾಡಿದ ವಂಚಕರು , ಸೋಫಾಸೆಟ್ ನ್ನು 10 ಸಾವಿರ ರೂ.ಗೆ ಹಣವನ್ನು ಆನ್ ಲೈನ್ ಖರೀದಿಸಿ ಪೇಮೆಂಟ್ ಮಾಡುತ್ತೇವೆ ಎಂದು ಹೇಳಿ ಎರಡು ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್‌ನಿಂದ 9 ಬಾರಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿ ಬರೊಬ್ಬರಿ 1.59 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.
Kshetra Samachara
03/06/2022 07:05 pm