ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಲದ ಹೆಸರಲ್ಲಿ 80 ಸಾವಿರ ವಂಚನೆ !

ಹುಬ್ಬಳ್ಳಿ: ವ್ಯಕ್ತಿಯೊಬ್ಬರಿಗೆ 1 ಲಕ್ಷ ರೂ. ವೈಯಕ್ತಿಕ ಸಾಲ ನೀಡುವುದಾಗಿ ನಂಬಿಸಿ ವಿವಿಧ ಬಗೆಯ ಚಾರ್ಜ್ ಹೆಸರಲ್ಲಿ 80 ಸಾವಿರ ರೂ. ವಂಚನೆ ಮಾಡಿದ ಘಟನೆ ನಡೆದಿದೆ.

ಗದಗ ರಸ್ತೆ ಹಾಲಿನ ಪಾರ್ಕ್‌ನ ನಿವಾಸಿ ರೇಖರಾಜ ಮಹಾವತ ವಂಚನೆಗೊಳಗಾದವರು , ಮನೆ ಕಟ್ಟಲು ಸಾಲ ಪಡೆಯಲು ಗೂಗಲ್ ನಲ್ಲಿ ಬಡ್ಡಿ ದರ ಪರಿಶೀಲಿಸಿದ್ದಾರೆ. ಈ ವೇಳೆ ವಂಚಿಸುವ ಉದ್ದೇಶದಿಂದ ಹಾಕಿದ ಬಜಾಜ್ ಫೈನಾನ್ಸ್ ಪರ್ಸನಲ್ ಲೋನ್ ಎಂಬ ಪೇಜ್‌ನಲ್ಲಿ ಹೆಸರು , ವಿಳಾಸ ಹಾಗೂ ಮೊಬೈಲ್ ನಂಬರ್ ಹಾಕಿದ್ದಾರೆ.

ಇದನ್ನು ನಂಬಿ ಕರೆ ಮಾಡಿದ ರೇಖರಾಜ ಅವರಿಗೆ 6 ಲಕ್ಷ ರೂ ವೈಯಕ್ತಿಕ ಸಾಲ ನೀಡುವುದಾಗಿ ಹೇಳಿ ನಂಬಿಸಿದ್ದಾರೆ. ಬಳಿಕ ವಿವಿಧ ಬಗೆಯ ಚಾರ್ಜ್‌ಗಳೆಂದು ಹೇಳಿ ಹಂತ ಹಂತವಾಗಿ ಒಟ್ಟು ಆನ್‌ಲೈನ್‌ ಮೂಲಕ 80 ಸಾವಿರ ರೂ. ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

03/06/2022 02:39 pm

Cinque Terre

18.86 K

Cinque Terre

0

ಸಂಬಂಧಿತ ಸುದ್ದಿ