ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಇಷ್ಟು ದಿನ ಶಾಂತಿ ಸೌಹಾರ್ದತೆಯಿಂದ ಕೂಡಿತ್ತು. ಆದರೆ ಅದ್ಯಾವ ವಕ್ರದೃಷ್ಟಿ ಹೂಬಳ್ಳಿಯ ಮೇಲೆ ಬಿದ್ದಿದೆಯೋ ಗೊತ್ತಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಗಲಾಟೆ ಹಾಗೂ ಕ್ಷುಲ್ಲಕ ಕಾರಣಕ್ಕೂ ಕೊಲೆಗಳು ನಡೆಯುತ್ತಿವೆ.

ಹೌದು.ಹಣಕ್ಕಾಗಿ ಬೆಡಿಕೆಯಿಟ್ಟು ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೇವಲ ಗುಟಕಾ ವಿಚಾರವಾಗಿ ಮೊನ್ನೆಯಷ್ಟೆ ಇದೆ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದನಗರದಲ್ಲಿ ಯುವಕನ ಕೊಲೆ ನಡೆದಿತ್ತು. ಆದರೆ ಇಂತಹದೆ ವಿಚಾರವಾಗಿ ಇಂದು ಕೂಡ ಅದೇ ರೀತಿ ನೇಕಾರನಗರದ ತಿಮ್ಮಸಾಗರ ರಸ್ತೆಯಲ್ಲಿ ಯುವಕನೊರ್ವನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದವನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಗೆ ಗೌಸ್ (ಅಲಿಯಾಸ್@ ಬದಕ್ ಗೌಸ್ಯಾ) ಮತ್ತು ಅವನ ಸಹಚರರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಗಾಯಾಳು ಮುನ್ನಾ ಬಾನಿ ಆರೋಪಿಸಿದ್ದಾರೆ. ಸದ್ಯಕ್ಕೆ ಆರೋಪಿ ನಾಪತ್ತೆಯಾಗಿದ್ದು, ಘಟನೆ ಕುರಿತು ಹಳೆ ಹುಬ್ಬಳ್ಳಿಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

29/05/2022 09:52 pm

Cinque Terre

37.45 K

Cinque Terre

3

ಸಂಬಂಧಿತ ಸುದ್ದಿ