ಧಾರವಾಡ: ದನ ಮೇಯಿಸಲು ಹೋದ ವ್ಯಕ್ತಿಯೊಬ್ಬ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ನಡೆದಿದೆ.
ಯಲ್ಲಪ್ಪ ಕಾಳೆ (51) ಎಂಬಾತನೇ ಸಾವನ್ನಪ್ಪಿದ ವ್ಯಕ್ತಿ. ಯಲ್ಲಪ್ಪ ನಿನ್ನೆ ದನ ಮೇಯಿಸಲೆಂದು ಹೊಲಕ್ಕೆ ಹೋಗಿದ್ದ. ಈ ವೇಳೆ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು, ಸಾವನ್ನಪ್ಪಿದ್ದಾನೆ.
ದನಗಳು ವಾಪಸ್ ಮನೆಗೆ ಬಂದರೂ ಯಲ್ಲಪ್ಪ ಮನೆಗೆ ಬರದೇ ಇದ್ದಿದ್ದರಿಂದ ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಇಂದು ಬೆಳಿಗ್ಗೆ ಉಳವಪ್ಪ ಕಾನ್ನವರ ಎಂಬುವವರ ಹೊಲದಲ್ಲಿದ್ದ ಕೃಷಿ ಹೊಂಡದಲ್ಲಿ ಯಲ್ಲಪ್ಪ ಶವವಾಗಿ ಪತ್ತೆಯಾಗಿದ್ದಾನೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಶವವನ್ನು ಹೊರತೆಗೆದು ದೂರು ದಾಖಲಿಸಿಕೊಂಡಿದ್ದಾರೆ.
Kshetra Samachara
24/05/2022 01:11 pm