ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾರಾಮಾರಿ

ಧಾರವಾಡ: ಧಾರವಾಡದ ರೈಲ್ವೆ ನಿಲ್ದಾಣದ ಆವರಣದಲ್ಲಿ ಆಟೊ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರ ಮಧ್ಯೆ ಮಾರಾಮಾರಿ ನಡೆದಿದೆ.

ಈ ಮಾರಾಮಾರಿ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಯಾಣಿಕರೊಬ್ಬರು ಇಮ್ರಾನ್ ಹಾಶಂವಾಲೆ ಎನ್ನುವವರ ಬಳಿ ಬಂದು ಆಟೊ ತೆಗೆದುಕೊಂಡು ಬಾಡಿಗೆ ಬರುವಂತೆ ಕೇಳಿದ್ದಾರೆ. ಪ್ರಯಾಣಿಕರು ಮತ್ತು ಇಮ್ರಾನ್ ಅವರ ಮಧ್ಯೆ ಬಾಡಿಗೆ ಹಣ ಹೊಂದಾಣಿಕೆಯಾಗದೇ ಇದ್ದದ್ದರಿಂದ ಪ್ರಯಾಣಿಕರು ಬೇರೆ ಆಟೊ ತೆಗೆದುಕೊಂಡು ತೆರಳಿದ್ದಾರೆ.

ಆದರೆ, ಇದೇ ವಿಷಯಕ್ಕೆ ಇಮ್ರಾನ್ ಅವರೊಂದಿಗೆ ಜಗಳ ತೆಗೆದ ಅಜರುದ್ದೀನ್ ಧಾರವಾಡ ಹಾಗೂ ಆಸೀಫ್ ಧಾರವಾಡ ಎನ್ನುವವರು ಬಾಡಿಗೆ ಬಂದ ಪ್ರಯಾಣಿಕರನ್ನು ಏಕೆ ಕೈ ಬಿಟ್ಟೆ. ಅವರನ್ನು ನಮ್ಮ ಬಳಿ ಕಳುಹಿಸಬೇಕಿತ್ತು ಎಂದು ವಾಗ್ವಾದ ನಡೆಸಿದ್ದಾರೆ. ತೀವ್ರ ವಾಗ್ವಾದ ನಡೆದು ಕೈ ಕೈ ಕೂಡ ಮಿಲಾಯಿಸಿದ್ದಾರೆ. ಇದನ್ನು ಬಿಡಿಸಲು ಬಂದ ಇಮ್ರಾನ್ ಸಹೋದರ ವಾಸೀಂ ಹಾಶಂವಾಲೆ ಅವರ ಮೇಲೂ ಅಜರುದ್ದೀನ್ ಹಾಗೂ ಆಸೀಪ್ ದಾಳಿ ಮಾಡಿದ್ದಾರೆ.

ಈ ಸಂಬಂಧ ಇಮ್ರಾನ್ ಹಾಗೂ ವಾಸೀಂ ವಿದ್ಯಾಗಿರಿ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.

Edited By : Shivu K
Kshetra Samachara

Kshetra Samachara

11/05/2022 02:12 pm

Cinque Terre

55.17 K

Cinque Terre

8

ಸಂಬಂಧಿತ ಸುದ್ದಿ