ಹುಬ್ಬಳ್ಳಿ: ಬ್ಯಾಂಕ್ ಖಾತೆಯ ಕೆವೈಸಿ ಅಪಡೇಟ್ ಮಾಡಬೇಕು ಎಂದು ಚನ್ನವ್ವ ಸೂರಿಯವರಿಗೆ ಕರೆ ಮಾಡಿದ ವ್ಯಕ್ತಿ 1,52,934 ರೂ. ವಂಚಿಸಿದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ನಗರದ ಚನ್ನವ್ವ ಎಂಬುವರಿಗೆ ಕರೆ ಮಾಡಿ ನಿಮ್ಮ ಬ್ಯಾಂಕ್ ಸ್ಥಗಿತವಾಗುತ್ತೆ. ಕೆವೈಸಿ ಅಪಡೇಟ್ ಮಾಡಿಕೊಳ್ಳಬೇಕು ಎಂದು ನಂಬಿಸಿ ಎಟಿಎಂ ಕಾರ್ಡ್ ನಂಬರ ಮತ್ತು ಒಟಿಪಿ ಪಡೆದು ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
Kshetra Samachara
26/04/2022 08:42 am