ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕೋಮುಗಲಭೆಯ ಮಾಸ್ಟರ್ ಮೈಂಡ್ ಎಂದೇ ಬಿಂಬಿತವಾಗಿರುವ ವಾಸೀಂ ಪಠಾಣ್ ಇಂದಿನಿಂದ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಹಿನ್ನಲೆ ಇಂದಿನಿಂದ ಪೊಲೀಸರು ಮ್ಯಾರಥಾನ್ ವಿಚಾರಣೆ ನಡೆಸಲಿದ್ದಾರೆ.
ಮಾಸ್ಟರ್ ಮೈಂಡ್ ವಸೀಂ ಪಠಾಣ್,ತೌಫಿಕ್ ಮುಲ್ಲಾ ನನ್ನು ನ್ಯಾಯಾಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಆದರೇ ಪೊಲೀಸರು 10 ದಿನ ಪೊಲೀಸ್ ಕಸ್ಟಡಿಗೆ ಕೇಳಿದ್ದರು. ಆದ್ರೆ ಐದು ದಿನ ಮಾತ್ರ ನೀಡಿ ಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ವಿಚಾರಣೆ ಚುರುಕುಗೊಂಡಿದೆ.
ಇನ್ನೂ ಪೊಲೀಸರು ಇಬ್ಬರನ್ನೂ ಪ್ರತ್ಯೇಕ ವಿಚಾರಣೆ ನಡೆಸಲಿದ್ದಾರೆ. ಗಲಭೆ ಅಸಲಿಯತ್ತು, ಗಲಭೆಯ ಹಿಂದಿನ ಷಡ್ಯಂತ್ರ, ಆ ಸಂಘಟನೆಯ ಕರಿನೆರಳು ಸೇರಿದಂತೆ ಅನೇಕ ಪ್ರಶ್ನೆಗಳನ್ನು ಪೊಲೀಸರು ಕೇಳಲಿದ್ದಾರೆ. ಗಲಭೆಯ ಹಿಂದೆ ಯಾವುದಾದ್ರು ಸಂಘಟನೆ ಕೈವಾಡವಿದೆಯಾ ಎನ್ನುವ ಬಗ್ಗೆಯೂ ಸುದೀರ್ಘ ವಿಚಾರಣೆ ನಡೆಯಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/04/2022 11:16 am