ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಗಲಭೆಯ ಮಾಸ್ಟರ್ ಮೈಂಡ್ ಎಂದು ಬಿಂಬಿತವಾಗಿರುವ ವಾಸೀಂ ಪಠಾಣ್ ಎಂಬಾತನನ್ನು ಬೆಳಗಾವಿಯಿಂದ ಬಂಧಿಸಿ ಹುಬ್ಬಳ್ಳಿಗೆ ಕರೆತಂದು ವಿಚಾರಣೆ ನಡೆಸಿದ ಪೊಲೀಸರು, ತಡರಾತ್ರಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ.
ಹೌದು..ವಾಸೀಂ ಪಠಾಣ್ ನನ್ನು ತಡರಾತ್ರಿ ನ್ಯಾಯಧೀಶರ ಎದುರು ಹಾಜರು ಪಡಿಸಿದ್ದು, ನಿನ್ನೆ ಮಧ್ಯಾಹ್ನ ಬಂಧಿತನಾಗಿದ್ದ ಆರೋಪಿಯನ್ನು ಕಮೀಷನರ್ ಹಾಗೂ ಇಬ್ಬರು ಡಿಸಿಪಿಗಳ ಮಧ್ಯದಲ್ಲಿ ತೀವ್ರ ವಿಚಾರಣೆ ನಡೆಸಿ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.
ಸದ್ಯ ತೀವ್ರ ವಿಚಾರಣೆ ಬಳಿಕ ಹಳೆ ಹುಬ್ಬಳ್ಳಿಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮಾಸ್ಟರ್ ಮೈಂಡ್ ವಾಸೀಂ ಪಠಾಣನನ್ನು ಹುಬ್ಬಳ್ಳಿಯ ಸಬ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/04/2022 09:26 am