ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಮ್ಐಎಮ್ ಮುಖಂಡ ಮಹಮ್ಮದ್ ಆರಿಫ್ ಎಂಬುವವನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಗಲಭೆ ನಡೆದ ದಿನ ಪೊಲೀಸರ ಜತೆ ವಾಗ್ವಾದ ಮಾಡಿದ್ದ ಆರಿಫ್ ಎಂಬುವನನ್ನು ವಶಕ್ಕೆ ಪಡೆದಿದ್ದು, ಗಲಾಟೆಗೆ ಪ್ರಚೋದನೆ ನಡೆದಿದ್ದ ಎರಡನೇ ಮಾಸ್ಟರ್ ಮೈಂಡ್ ಎಂದು ಬಿಂಬಿತವಾಗಿದ್ದ ಮಹಮ್ಮದ್ ಆರಿಫ್ ನನ್ನು ವಶಕ್ಕೆ ಪಡೆಯಲಾಗಿದೆ.
ಮೌಲ್ವಿ ವಾಸಿಂ ಪಠಾಣ್ ಜತೆ ಪೊಲೀಸ್ ಇನ್ಸ್ಪೆಕ್ಟರ್ ಜೊತೆ ವಾದ ಮಾಡಿದ್ದ ಮಹಮ್ಮದ್ ಆರಿಫ್. ಆದರೆ ಗಲಭೆಯ ನಂತರ ತಲೆಮರೆಸಿಕೊಂಡಿದ್ದ.ಇದೀಗ ಆರಿಫ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗಲಭೆಯಲ್ಲಿ ಆರಿಫ್ ಪಾತ್ರದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
21/04/2022 08:13 pm