ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದ್ದು, ಕ್ಷಣಕ್ಷಣಕ್ಕೂ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಗಲಾಟೆಯಲ್ಲಿ ಪೊಲೀಸರ ಹತ್ಯೆಗೆ ಸಂಚು ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹಾಗಿದ್ದರೇ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಇಲ್ಲಿದೆ ಸ್ಫೋಟಕ ಮಾಹಿತಿ.
ಶನಿವಾರ ತಡರಾತ್ರಿ ನಡೆದ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಪೊಲೀಸರನ್ನು ಟಾರ್ಗೆಟ್ ಮಾಡಿಕೊಂಡು ಕಲ್ಲು ತೂರಾಟ ನಡೆಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ವಾಹನಗಳ ಸ್ಥಿತಿಯನ್ನು ನೋಡಿದರೇ ನಿಜಕ್ಕೂ ಪೊಲೀಸ್ ಹತ್ಯೆಗೆ ಸಂಚು ರೂಪಿಸಿದ್ರಾ.? ಗಲಭೆಕೋರರು ಎಂಬುವಂತ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜವಾಗಿದೆ.
ಗಲಾಟೆಯನ್ನು ಬಂಡವಾಳ ಮಾಡಿಕೊಂಡ ಗಲಾಟೆಕೋರರು ಪೊಲೀಸರನ್ನು ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿದ್ದು, ಕೂದಲೆಳೆಯ ಅಂತರದಲ್ಲಿ ಇಬ್ಬರು ಕಾನ್ಸ್‌ಟೇಬಲ್ ಗಳು ಬಚಾವ್ ಆಗಿದ್ದಾರೆ. ಸೈಜಗಲ್ಲು ಎತ್ತಿಹಾಕಿ ಇಬ್ಬರೂ ಕಾನ್ಸ್‌ಟೇಬಲ್ ಗಳನ್ನು ಹತ್ಯೆ ಮಾಡಲು ಯತ್ನಸಿದ ಗಲಭೆಕೋರರು ಕಸಬಾಪೇಟೆ ಠಾಣೆಯ ಕಾನ್ಸ್‌ಟೇಬಲ್ ಗಳಾದ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರಡ್ಡಿ ಎಂಬುವವರ ಮೇಲೆ ಹತ್ಯೆಗೆ ಯತ್ನಿಸಿದ್ದಾರೆ. ದಡ್ಡಿ ಹನುಮಂತ ದೇವಸ್ಥಾನದ ಬಳಿ ಇಬ್ಬರೂ ಕಾನ್ಸ್‌ಟೇಬಲ್ ಗಳನ್ನು ತಡೆದು ಕೊಲ್ಲಲು ಪ್ರಯತ್ನ ಮಾಡಿರುವ ಮಾಹಿತಿ ಲಭ್ಯವಾಗಿದೆ. ಇನ್ನೂ ಕಾನ್ಸ್‌ಟೇಬಲ್ ಸುತ್ತುವರೆದು ಕೊಲ್ಲಲು ಮುಂದಾಗಿದ್ದ 10 ರಿಂದ 15 ಜನ ಗಲಭೆಕೋರರಿಂದ ಬೈಕ್ ಬಿಟ್ಟು ತಪ್ಪಿಸಿಕೊಂಡು ಪೊಲೀಸ್ ಸಿಬ್ಬಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ದೂರ ಸಹ ಪೊಲೀಸರು ದಾಖಲಿಸಿದ್ದಾರೆ.
ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹುಬ್ಬಳ್ಳಿಯ ಶಾಂತಿಯನ್ನು ಹಾಳು ಮಾಡುವುದು ಮಾತ್ರವಲ್ಲದೆ ಪೊಲೀಸರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂಬುವಂತ ಮಾಹಿತಿ ಖಾಕಿ ಪಡೆಯ ನಿದ್ರೆಗೆಡೆಸಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮಗಳನ್ನು ಪೊಲೀಸ್ ಇಲಾಖೆ ಜರುಗಿಸಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/04/2022 09:57 pm