ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ ನಡೆದು ಮೂರು ದಿನ ಕಳೆದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದರೂ ಕೂಡ ಭೀಕರತೆ ಮಾತ್ರ ಕಡಿಮೆಯಾಗಿಲ್ಲ. ಈಗ ಗಲಾಟೆಯ ಮತ್ತೊಂದು ಭೀಕರ ವೀಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ. ಈ ವೀಡಿಯೋ ನೋಡಿದ್ರೆ ಎಂತವರು ಕೂಡ ಬೆಚ್ಚಿ ಬೀಳುವುದು ಗ್ಯಾರಂಟಿ.
ಗಲಭೆ ಟಾಪ್ ಆ್ಯಂಗಲ್ ವೀಡಿಯೋ ಈಗ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ರೂ ಬಗ್ಗದ ಕಿಡಿಗೇಡಿಗಳ ಪುಂಡಾಟ ದೃಶ್ಯದಲ್ಲಿ ಸೆರೆಯಾಗಿದೆ.
ಒಂದು ಕಡೆಯಲ್ಲಿ ಪೊಲೀಸರು ಗಲಭೆಕೋರರನ್ನು ಚದುರಿಸಲು ಮುಂದಾಗಿದ್ರೆ, ಮತ್ತೊಂದು ಕಡೆಯಲ್ಲಿ ಕಿಡಿಗೇಡಿಗಳ ಗುಂಪು ಪೊಲೀಸರ ಮೇಲೆಯೆ ಅಟ್ಯಾಕ್ ಮಾಡಲು ಬರುತ್ತಿರುವ ದೃಶ್ಯಗಳು ಈಗ ವೈರಲ್ ಆಗಿವೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/04/2022 06:30 pm