ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾರ್ಯಾಚರಣೆ ಮತ್ತೆ ಮುಂದುವರೆದಿದ್ದು, ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಪ್ಲ್ಯಾನ್ ಮಾಡಿರುವ ಪೊಲೀಸರು ಗಂಟೆ ಗಂಟೆಗೂ ಆರೋಪಿಗಳನ್ನು ಬಂಧನ ಮಾಡುತ್ತಿದ್ದಾರೆ.
ಹೌದು.. ಆರೋಪಿಗಳನ್ನು ಪತ್ತೆ ಮಾಡಿ ಎಳೆದು ತರುತ್ತಿರುವ ಪೊಲೀಸರು ಮತ್ತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಹಳೇ ಹುಬ್ಬಳಿ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ. ಇನ್ನೂ ಇತ್ತ ಪೊಲೀಸರು ಆರೋಪಿಗಳನ್ನು ಕರೆತರುತ್ತಿರುವಂತೆಯೇ ಅತ್ತ ಕುಟುಂಬಸ್ಥರ ಹೈಡ್ರಾಮಾ ಆರಂಭವಾಗಿದ್ದು, ಪೊಲೀಸ್ ಠಾಣೆ ಎದುರು ಆರೋಪಿಗಳ ತಾಯಂದಿರ ಹೈಡ್ರಾಮಾ ಸ್ಟಾರ್ಟ್ ಆಗಿದೆ.
ಠಾಣೆಯ ಮುಂದೆ ಕಣ್ಣೀರು ಹಾಕುತ್ತಾ ಆಗಮಿಸುತ್ತಿರುವ ಆರೋಪಿಗಳ ಕುಟುಂಬಸ್ಥರು. ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಹೈಡ್ರಾಮಾ ಶುರು ಮಾಡಿದ್ದಾರೆ. ಅಲ್ಲದೇ ಪೊಲೀಸರ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/04/2022 01:50 pm