ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ- ಕೋಮು ಗಲಭೆಗೆ ಬಿಗ್ ಟ್ವಿಸ್ಟ್

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ನಿನ್ನೆ ತಡರಾತ್ರಿ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಯುವಕರೇ ಹೆಚ್ಚಾಗಿ ಈ ಗಲಾಟೆಯಲ್ಲಿ ಪಾಲ್ಗೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಯುವಕರು ಕಲ್ಲು ತೂರಾಟ ನಡೆಸಿರುವ ವಿಡಿಯೋ ಈಗ ಮಾಧ್ಯಮಕ್ಕೆ ಲಭ್ಯವಾಗಿದೆ.

ಹೌದು. 14 ಸೆಕೆಂಡ್ ವಿಡಿಯೋವೊಂದು ಹುಬ್ಬಳ್ಳಿಯ ಶಾಂತಿಯನ್ನು ಹಾಳು ಮಾಡಿದ್ದು, ಈಗ ಕೋಮು ಗಲಭೆ ಉಂಟಾಗಿದೆ‌. ಈ ನಿಟ್ಟಿನಲ್ಲಿ ಆಕ್ರೋಶಗೊಂಡ ಕಿಡಗೇಡಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಈಗಾಗಲೇ ಪೊಲೀಸ್ ಇಲಾಖೆಯವರು ಎಂಟು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದು, 40 ಜನರನ್ನು ವಶಕ್ಕೆ ಪಡೆದಿದೆ. ಅಲ್ಲದೇ ಕೃತ್ಯ ಎಸಗಿ ಪರಾರಿಯಾದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಹೆಡೆಮುರಿ ಕಟ್ಟಲು ಕಾರ್ಯಾಚರಣೆ ನಡೆಸಿದೆ.

Edited By : Shivu K
Kshetra Samachara

Kshetra Samachara

17/04/2022 04:12 pm

Cinque Terre

105.18 K

Cinque Terre

72

ಸಂಬಂಧಿತ ಸುದ್ದಿ