ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾರಿನ ಗ್ಲಾಸ್ ಒಡೆದು ಕಳ್ಳತನ- ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಸುಮಾರು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆಯಿಂದ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆ ಕೇವಲ ದೂರು ದಾಖಲು ಮಾಡಿಕೊಳ್ಳುವುದಕ್ಕಾಗಿ ಇದೆಯೇ ಎಂಬುವಂತ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಮನೆ, ಬೈಕ್ ಹಾಗೂ ವಿವಿಧ ರೀತಿಯ ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಕಟ್ಟುನಿಟ್ಟಿನ ಕ್ರಮಗಳು ಮಾತ್ರ ಜಾರಿಯಾಗುತ್ತಿಲ್ಲ. ಇನ್ನೂ ವಿದ್ಯಾನಗರದ ವಿದ್ಯಾವಿಹಾರ ಕಾಲೋನಿಯಲ್ಲಿ ವ್ಯಾಗನರ್ ಕಾರಿನಲ್ಲಿ ಬಂದ ಖದೀಮರು ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಹುಬ್ಬಳ್ಳಿಯ ವಿದ್ಯಾನಗರದ ವಿದ್ಯಾವಿಹಾರ ಕಾಲೋನಿಯಲ್ಲಿ ಕಳ್ಳತನದ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇವೆ. ಅಲ್ಲದೇ ಸ್ವಿಫ್ಟ್, ವ್ಯಾಗನರ, ಟಾಟಾ ಟಿಯಾಗೊ, ಬುಲೇರೊ, ಇನೋವಾದ ಗ್ಲಾಸ್ ಒಡೆದು ವಾಹನದಲ್ಲಿನ ಮ್ಯೂಸಿಕ್ ಸಿಸ್ಟಮ್ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಇಂತಹ ಪ್ರಕರಣ ದಾಖಲಾಗುತ್ತಿದ್ದರೂ ಕೂಡ ಪೊಲೀಸ್ ಇಲಾಖೆ ಮೌನ ತಾಳಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ‌. ಕೂಡಲೇ ಪೊಲೀಸ್ ಇಲಾಖೆಯು ಇಂತಹ ಖದೀಮರ ಹೆಡೆಮುರಿ ಕಟ್ಟುವ ಕಾರ್ಯವನ್ನು ಮಾಡಬೇಕಿದೆ.

Edited By : Shivu K
Kshetra Samachara

Kshetra Samachara

15/04/2022 09:04 am

Cinque Terre

41.64 K

Cinque Terre

6

ಸಂಬಂಧಿತ ಸುದ್ದಿ