ಹುಬ್ಬಳ್ಳಿ: ನಗರದ ಮಿಲ್ಲತ್ ನಗರದ ಮೊಹಮ್ಮದ ಎಂಬುವರಿಗೆ ಅಪರಿಚಿತನೊಬ್ಬ ಕರೆ ಮಾಡಿ, ನೀವು ಆನ್ ಲೈನ್ ದಲ್ಲಿ ಆರ್ಡರ್ ಮಾಡಿದ ವಿಳಾಸ ಮಿಸ್ ಮ್ಯಾಚ್ ಆಗಿದೆ. ಅದನ್ನು ಸರಿಪಡಿಸಲು ಆನ್ ಲೈನ್ ನಲ್ಲಿ 5 ರೂ. ಪೇ ಮಾಡಿ ಎಂದು ನಂಬಿಸಿ, ಲಿಂಕ್ ಸಂದೇಶ ಕಳುಹಿಸಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ , ಯುಪಿಐ ಪಿನ್ ಹಾಕಿ ಸಬ್ಮಿಟ್ ಮಾಡಿಸಿಕೊಂಡು ಯುಪಿಐ ಟ್ರ್ಯಾಂಜಕ್ಷನ್ ಮೂಲಕ 89,399 ರೂ. ವಂಚಿಸಿದ್ದಾನೆ.
ಪ್ಲಿಪ್ಕಾರ್ಟ್ ಪ್ರತಿನಿಧಿ ಎಂದು ಕರೆ ಮಾಡಿದ ಅಪರಿಚಿತ, ಆನ್ ಲೈನ್ ದಲ್ಲಿ ಆರ್ಡರ್ ಮಾಡಿದ ಮಟಿರಿಯಲ್ ಕೊಡಬೇಕೆಂದರೆ ವಿಳಾಸ ಮಿಸ್ ಮ್ಯಾಚ್ ಆಗಿದೆ. ಅದನ್ನು ಸರಿಪಡಿಸುವೆ. ನಿಮಗೆ ಬಂದ ಒಟಿಪಿಯನ್ನು ಮೊಬೈಲ್ ಸಂಖ್ಯೆಗೆ ಪಾರ್ವರ್ಡ್ ಮಾಡಿ ನೀವು ಹಾಕಿದ 5 ರೂ.ವನ್ನು ಮಟಿರಿಯಲ್ ಕೊಡಲು ಬಂದಾಗ ಮರಳಿಸುವುದಾಗಿ ನಂಬಿಸಿದ್ದಾನೆ. ನಂತರ ಲಿಂಕ್ ಕಳುಹಿಸಿ ಮಾಹಿತಿ ಸಬ್ಮಿಟ್ ಮಾಡಿಸಿಕೊಂಡು ಅವರ ಬ್ಯಾಂಕ್ ಖಾತೆಯಿಂದ ಹಣ ಪಡೆದು ವಂಚಿಸಿದ್ದಾನೆ. ಈ ಕುರಿತು ಸಿಇಎನ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
14/04/2022 11:36 am