ಹುಬ್ಬಳ್ಳಿ: ನಗರದ ಕೇಶ್ವಾಪುರ ಶಾಂತಿನಗರದ ಥಾಮಸ್ ಎಂಬ ನಿವೃತ್ತರಿಗೆ ವಂಚಕರು ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಕೂಡಲೇ ಕೆವೈಸಿ ಅಪ್ಡೇಟ್ ಮಾಡಿ ಎಂಬ ಸಂದೇಶ ಕಳುಹಿಸಿ 49,975 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಖಾತೆ ಬಂದ್ ಆಗುತ್ತದೆಂದು ಥಾಮಸ್ ಅವರು ಸಂದೇಶದಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅಪರಿಚಿತ ತಾನು ಕೆನರಾ ಬ್ಯಾಂಕ್ ವ್ಯವಸ್ಥಾಪಕನೆಂದು ನಂಬಿಸಿ, ಅವರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್, ಸಿವಿವಿ ಸಂಖ್ಯೆಗಳು ಮತ್ತು ಎಕ್ಸಪೈರಿ ಡೇಟ್, ಒಟಿಪಿ ಸಂಖ್ಯೆ ಪಡೆದು ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸವೆಸಗಿದ್ದಾನೆ. ಈ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
14/04/2022 11:30 am