ಹುಬ್ಬಳ್ಳಿ : ಖರೀದಿಸಿದ ಮಾಂಸದ ಬಾಕಿ ಹಣ ನೀಡು ಎಂದು ಕೇಳಿದ್ದಕ್ಕೆ ಕಟಗರ ಓಣಿಯ ಮಾಂಸದ ಅಂಗಡಿ ವ್ಯಾಪಾರಿ ಮಾದರಸಾಬ್ ಬೇಪಾರಿ ಅವರಿಗೆ ಹಳೇಹುಬ್ಬಳ್ಳಿಯ ಮಲ್ಲಿಕಾರ್ಜುನ ವಡ್ಡು ಜೀವ ಬೆದರಿಕೆ ಹಾಕಿದ್ದಾನೆ ಎಂದು ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲಿಕಾರ್ಜುನ ವಡ್ಡು ಖರೀದಿಸಿದ ಮಾಂಸದ ಬಾಕಿ 10,800 ಉಳಿಸಿಕೊಂಡಿದ್ದ. ಅದನ್ನು ನೀಡುವಂತೆ ಮಾದರಸಾಬ್ ಕೇಳಿದಾಗ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
13/04/2022 11:11 am