ಧಾರವಾಡ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಕೆಲಗೇರಿ ಬಳಿಯ ಆಂಜನೇಯ ನಗರದಲ್ಲಿ ನಿನ್ನೆ ರಾತ್ರಿ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಆಂಜನೇಯ ನಗರದ ಬಸವರಾಜ ಮತ್ತು ಕಾರ್ತಿಕ ಎಂಬುವರನ್ನು ಸಿಸಿಬಿ ಇನ್ಸಪೆಕ್ಟರ್ ಎಚ್.ಎಂ.ಪಾಟೀಲ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಬಸವರಾಜ ಎನ್ನುವ ಇನ್ನೋರ್ವ ವ್ಯಕ್ತಿ ಮತ್ತು ರವಿ ಎಂಬುವವರು ಪರಾರಿಯಾಗಿದ್ದಾರೆ. ಬಂಧಿತರಿಂದ 2020 ರೂಪಾಯಿ ನಗದು ಮತ್ತು 2 ಮೊಬೈಲ್ ಇನ್ನಿತರ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.
ಇನ್ನು ಶನಿವಾರ ರಾತ್ರಿ ಗುಜರಾತ್ ಟೈಟನ್ಸ್ ಮತ್ರು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಧ್ಯೆ ಆಟ ನಡೆಯುತ್ತಿದ್ದಾಗ ಶಹರ ಠಾಣಾ ವ್ಯಾಪ್ತಿಯ ಚರಂತಿಮಠ ಗಾರ್ಡನ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಿಂತು ಬೆಟ್ಡಿಂಗ್ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಿಸಿಬಿ ಇನ್ಸಪೆಕ್ಟರ್ ವಿ.ಎಸ್.ಚೌಗುಲೆ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಸೊಲ್ಲಾಪುರ ಮೂಲದ ತಸ್ಲೀಂ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿತನಿಂದ 12 ಸಾವಿರ ರೂಪಾಯಿ ನಗದು ಮತ್ತಿತರರ ಸಾಮಗ್ರಿಗಳನ್ನು ವಶಪಡಿಸಿ ಕೊಳ್ಳಲಾಗಿದೆ.
Kshetra Samachara
04/04/2022 03:10 pm