ಹುಬ್ಬಳ್ಳಿ: ಬ್ಯಾಂಕ್ ಖಾತೆಯ ಸಂಬಂಧಿಸಿದ ಪ್ಯಾನ್ ಕಾರ್ಡ್ ಅಪಡೇಟ್ ಮಾಡಬೇಕು ಎಂದು ಸಂದೇಶ ಕಳುಹಿಸಿ ಅಪರಿಚಿತ ವ್ಯಕ್ತಿಯೊಬ್ಬ ಗೋಕುಲ ರಸ್ತೆಯ ವಿ.ಜಿ. ಬುಶೆಟ್ಟಿ ಎಂಬುವರಿಗೆ 45,970 ರೂ. ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಇವರ ಮೊಬೈಲ್‌ಗೆ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಪ್ಯಾನ್ ಕಾರ್ಡ್ ಅಪಡೇಟ್ ಮಾಡಿದಿದ್ದರೆ ಸ್ಥಗಿತವಾಗುತ್ತೆ ಎಂದು ಮೊದಲು ಸಂದೇಶದ ಜೊತೆ ಲಿಂಕ್ ಕಳುಹಿಸಿದ್ದಾನೆ.
ಇದನ್ನು ನಂಬಿದ ಅವರು ಲಿಂಕ್ ಓಪನ್ ಮಾಡಿದಾಗ ಯೋನೋ ಎಸ್‌ಬಿಐ ಎಂದು ಬಂದಿದೆ. ನಂತರ ಅದರಲ್ಲಿ ತಮ್ಮ ಸ್ವವಿವರ, ಪಾಸರ್ವಡ್, ಮೊಬೈಲ್ ಸಂಖ್ಯೆ ಹಾಕಿದ್ದಾರೆ. ಬಳಿಕ ಇವರಿಗೆ ಓಟಿಪಿ ಬಂದಿದ್ದು ಅದನ್ನು ಸಹ ಹಾಕಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಇವರ ಬ್ಯಾಂಕ್ ಖಾತೆಯಿಂದ ಒಟ್ಟು 45970 ರೂ. ವರ್ಗಾವಣೆ ಮಾಡಿ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
04/04/2022 09:26 am