ಧಾರವಾಡ: ಧಾರವಾಡದ ಮಾಳಾಪುರದಲ್ಲಿ ಬಾಲಕನೋರ್ವನ ಮೇಲೆ ನಾಲ್ಕೈದು ಜನ ಹಲ್ಲೆ ನಡೆಸಿದ್ದು, ಬಾಲಕನ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ.
ಅರುಣ ಚೋಳಣ್ಣವರ (14) ಎಂಬ ಬಾಲಕನೇ ಹಲ್ಲೆಗೊಳಗಾದವನು. ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ. ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆ ನಡೆಸಿದವರನ್ನು ಪೊಲೀಸರು ಇನ್ನಷ್ಟೇ ಪತ್ತೆ ಮಾಡಬೇಕಿದೆ.
Kshetra Samachara
02/04/2022 02:32 pm