ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಶ್ವಾನಗಳ ಆಟಾಟೋಪಕ್ಕೆ ಪ್ರಾಣಬಿಟ್ಟ 50 ಕುರಿ ಮರಿಗಳು

ಕುಂದಗೋಳ: ತಾಲೂಕಿನ ಬೆಟದೂರ ಗ್ರಾಮದ ಹೊರ ವಲಯದಲ್ಲಿ ಕುರಿಗಾಹಿಗಳು ದೊಡ್ಡಿಯಲ್ಲಿ ಕೂಡಿ ಹಾಕಿದ್ದ 50ಕ್ಕೂ ಅಧಿಕ ಕುರಿ ಮರಿಗಳು ಶ್ವಾನಗಳ ಹಾಗೂ ತೋಳದ ಅಟ್ಟಹಾಸಕ್ಕೆ ಬಲಿಯಾಗಿವೆ.

ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ರೈತರಾದ ಯಲ್ಲಪ್ಪ ತಿರ್ಲಕೊಪ್ಪ, ಬೀರಪ್ಪ ದೊಡ್ಡಮನಿ, ಭರಮಪ್ಪ ದೊಡ್ಡಮನಿ, ಫಕ್ಕೀರಪ್ಪ ತಿರ್ಲಕೊಪ್ಪ, ಕರೆಪ್ಪ ದೊಡ್ಡಮನಿ, ಬಸವರಾಜ ಗುಡಸಲಮನಿ ಎಂಬ ರೈತರು ಬೆಟದೂರ ಗ್ರಾಮದ ಹೊರವಲಯದಲ್ಲಿ ದೊಡ್ಡಿಯಲ್ಲಿ ಕೂಡಿ ಹಾಕಿ ಕುರಿ ಕಾಯಲು ಹೋದ ಸಂದರ್ಭ ಕುರಿ ಮರಿಗಳನ್ನು ಶ್ವಾನಗಳು ಹಾಗೂ ತೋಳಗಳು ಮಾಂಸದ ಆಸೆಗೆ ಕಚ್ಚಿ ಕೊಂದಿವೆ.

ಘಟನಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರು, ಜಿಲ್ಲಾ ಕಾಂಗ್ರೆಸ್ ಮುಖಂಡ ಮುತ್ತಣ್ಣ ಶಿವಳ್ಳಿ ಹಾಗೂ ಪಶು ಆಸ್ಪತ್ರೆ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Shivu K
Kshetra Samachara

Kshetra Samachara

30/03/2022 12:01 pm

Cinque Terre

42.03 K

Cinque Terre

2

ಸಂಬಂಧಿತ ಸುದ್ದಿ