ಹುಬ್ಬಳ್ಳಿ: ಸಾಫ್ಟ್‌ವೇರ್ ಹಾಗೂ ಐಟಿ ಕಂಪನಿಯ ವಿವಿಧ ಪ್ರಾಜೆಕ್ಟ್ ನೀಡುವುದಾಗಿ ಸಿಬಿಟಿ ಕಿಲ್ಲಾದ ಉದ್ಯಮಿ ವಿನೋದ ರಾಥೋಡ್ ಅವರಿಂದ 3.50 ಕೋಟಿ ರೂ. ಪಡೆದು ವಂಚಿಸಿದ ನಾಲ್ವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಿತ್ ಪ್ರಭು, ಅಂಕಿತಾ ಕಾಮತ್, ಬೆಂಗಳೂರಿನ ದೀಪಕ ಸುಂದರರಾಜನ್ ಹಾಗೂ ಹೈದರಾಬಾದ್‌ನ ಶ್ರವಣಕುಮಾರ ಆರೋಪಿಗಳು. ವಿನೋದ ರಾಥೋಡ್, ಅಮಿತ್ ಪ್ರಭು ಹಾಗೂ ಅಂಕಿತಾ ಕಾಮತ್ 2019ರಲ್ಲಿ ಸೆಟ್‌ಲೈಟ್ ಬಿಲ್ಡಿಂಗ್‌ನಲ್ಲಿ ಬಿಎಲ್‌ಎಚ್ ಹೈಟೆಕ್ ಪ್ರೈ.ಲಿ. ಆರಂಭಿಸಿದ್ದರು. ಸಿಂಗಪುರದಲ್ಲಿ ಪ್ರಾಜೆಕ್ಟ್ ಇದ್ದು, ಅದನ್ನು ಪಡೆಯಲು ಹಣ ಬೇಕಾಗುತ್ತದೆ ಎಂದು ವಿನೋದ ಅವರಿಂದ ಅಮಿತ್ ಹಾಗೂ ಅಂಕಿತಾ 15 ಲಕ್ಷ ರೂ. ಪಡೆದುಕೊಂಡಿದ್ದರು. ಹೀಗೆ ಬೇರೆ ಬೇರೆ ಪ್ರಾಜೆಕ್ಟ್ ಹೆಸರಿನಲ್ಲಿ 3.50 ಕೋಟಿ ರೂ. ಪಡೆದಿದ್ದಾರೆ. ವರ್ಷವಾದರೂ ಪ್ರಾಜೆಕ್ಟ್ ನೀಡದ್ದರಿಂದ ಹಣ ಮರಳಿಸುವಂತೆ ಕೇಳಿದ ವಿನೋದ ಅವರಿಗೆ ದೀಪಕ ಎಂಬಾತ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
30/03/2022 10:35 am