ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೈಕ್ ಅಡ್ಡಗಟ್ಟಿ ಫೋನ್ ಹಣ ಕಿತ್ತುಕೊಂಡು ಹೋದ ಖಧೀಮರು

ಹುಬ್ಬಳ್ಳಿ: ಕುಡಿಯಲು ನೀರು ಕೇಳುವ ನೆಪ ಮಾಡಿ ಇಬ್ಬರ ಬೈಕ್ ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ತೋರಿಸಿ, ಅವರ ಮೇಲೆ ಹಲ್ಲೆ ಮಾಡಿ, ಐಪೋನ್ ಮತ್ತು 8 ಸಾವಿರ ರೂ. ಹಣ ದೋಚಿಕೊಂಡು ಹೋದ ಘಟನೆ ಕುಸುಗಲ್‌ನಿಂದ ಗದಗ ಹೋಗುವ ರಿಂಗ್ ರೋಡ್‌ನಲ್ಲಿ ನಡೆದಿದೆ.

ಮಧುರಾ ಕಾಲನಿ ನಿವಾಸಿ ಅಭಿಷೇಕ ಪಿ., ಶಬರಿ ನಗರ ನಿವಾಸಿ ವಿನಾಯಕ ಕತಿಗಾರ ಎಂಬಾತರು ಹಲ್ಲೆಗೊಳಗಾದವರು. ಇವರಿಬ್ಬರು ಕುಸಗಲ್ ರಿಂಗ್ ರಸ್ತೆಯಿಂದ ಗದಗ ರಸ್ತೆ ಕಡೆ ಹೋಗುವಾಗ ನಾಲ್ವರು ಇವರನ್ನು ತಡೆದು ಮೊದಲು ನೀರು ಕೇಳಿದ್ದಾರೆ.

ನಂತರ ತಮ್ಮಲಿರುವ ಚಾಕು ಮತ್ತು ಪಂಚ್ ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಯಾಕೆ ಕೊಡಬೇಕು ಎಂದು ಮರಳಿ ಪ್ರಶ್ನೆ ಮಾಡಿದಕ್ಕೆ, ಇಬ್ಬರ ಮೇಲೆ ರಕ್ತ ಬರುವ ಹಾಗೇ ಹಲ್ಲೆ ಮಾಡಿ ಅವರ ಕಡೆಯಿಂದ ಮೊಬೈಲ್, ಹಣ ಮತ್ತು ಪರ್ಸ್ ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

25/03/2022 10:51 am

Cinque Terre

21.75 K

Cinque Terre

8

ಸಂಬಂಧಿತ ಸುದ್ದಿ