ಧಾರವಾಡ: ಧಾರವಾಡದ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳನ್ನು ಗುರುವಾರ ಭದ್ರತೆ ಮಧ್ಯೆ ಧಾರವಾಡದ ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಯಿತು.
ಕಲಬುರ್ಗಿ ಅವರ ಹತ್ಯೆ ಕುರಿತು ನ್ಯಾಯಾಲಯ ಇಂದು ವಿಚಾರಣೆ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸ್ ಭದ್ರತೆ ಮಧ್ಯೆ ನ್ಯಾಯಾಲಯಕ್ಕೆ ಕರೆತರಲಾಯಿತು.
ನ್ಯಾಯಾಲಯದ ಒಳ ಹೋಗುವ ಮುನ್ನ ಓರ್ವ ಆರೋಪಿ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ನಮ್ಮನ್ನು ಸಿಕ್ಕಿ ಹಾಕಿಸುತ್ತಿದ್ದಾರೆ. ಈ ಕೇಸ್‌ನ್ನು ಬೇಕಂತಲೇ ತಡಮಾಡುತ್ತಿದ್ದಾರೆ ಎನ್ನುತ್ತಲೇ ನ್ಯಾಯಾಲಯದ ಒಳಹೋಗಿದ ಪ್ರಸಂಗ ಜರುಗಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/03/2022 07:54 pm