ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಬ್ರೇಕಿಂಗ್: ಯುವತಿಯನ್ನು ಚುಡಾಯಿಸಿದ ಬೀದಿ ಕಾಮಣ್ಣನಿಗೆ ಸಹೋದ್ಯೋಗಿಗಳಿಂದ ಧರ್ಮದೇಟು

ಹುಬ್ಬಳ್ಳಿ: ಯುವತಿಯನ್ನು ಚುಡಾಯಿಸಿದ ಬೀದಿ ಕಾಮುಕನಿಗೆ ಯುವತಿಯ ಸಹೋದ್ಯೋಗಿಗಳು ಧರ್ಮದೇಟು ಕೊಟ್ಟಿದ್ದಾರೆ. ಕಾಮುಕನೊಬ್ಬ ಚುಡಾಯಿಸುತ್ತಿದ್ದನ್ನು ನೋಡಿದ ಸಹೋದ್ಯೋಗಿಗಳು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ ಗೋಕುಲ ರಸ್ತೆಯ ಐಸಿಸಿ ಬ್ಯಾಂಕ್ ಎದರು ನಡೆದಿದೆ.

ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಯುವತಿಯನ್ನು ಕಳೆದ ಒಂದು ವಾರದಿಂದ ಹಿಂಬಾಲಿಸಿಕೊಂಡು ಬರುತ್ತಿದ್ದ ಯುವಕ ದಿನಂಪ್ರತಿ ಚುಡಾಯಿಸುತ್ತಿದ್ದನಂತೆ. ಇದನ್ನು ಗಮನಿಸಿದ ಯುವತಿಯ ಸಹೋದ್ಯೋಗಿಗಳು ಆತನನ್ನು ಹಿಡಿದು ಧರ್ಮದೇಟು ಕೊಟ್ಟು ಪಾಠ ಕಲಿಸಿದ್ದಾರೆ. ಇದೇ ವೇಳೆ ನಾನು ಮಾಡಿದ್ದು ತಪ್ಪಾಯ್ತು ಕ್ಷಮಿಸಿ ಎಂದು ಯುವಕ ಯುವತಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಬೀದಿ ಕಾಮಣ್ಣನ್ನು ವಶಕ್ಕೆ ಪಡೆದಿದ್ದಾರೆ.

Edited By : Shivu K
Kshetra Samachara

Kshetra Samachara

16/03/2022 01:07 pm

Cinque Terre

47.48 K

Cinque Terre

13

ಸಂಬಂಧಿತ ಸುದ್ದಿ