ಧಾರವಾಡ: ಯುವತಿಯೊಬ್ಬಳಿಗೆ ಗ್ರಾಮ ಪಂಚಾಯ್ತಿ ಸದಸ್ಯನೋರ್ವ ಮದುವೆಯಾಗುವಂತೆ ಕಿರುಕುಳ ನೀಡಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡ ತಾಲೂಕಿನ ಬೋಗೂರು ಗ್ರಾಮದಲ್ಲಿ ನಡೆದಿದ್ದು, ಯುವತಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ಬೋಗೂರು ಗ್ರಾಮ ಪಂಚಾಯ್ತಿ ಸದಸ್ಯ ಮಲ್ಲಪ್ಪ ಮಾಳವಾಡ ಎಂಬಾತ ಅದೇ ಗ್ರಾಮದ ಸರಸ್ವತಿ ಅಜ್ಜಣ್ಣವರ ಎಂಬ ಯುವತಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ. ದಿನನಿತ್ಯ ಫೋನ್ ಮಾಡಿ ಕಿರುಕುಳ ಮಾಡುತ್ತಿದ್ದ. ಸದ್ಯ ಸರಸ್ವತಿಯ ಮದುವೆ ಮಾದನಭಾವಿ ಗ್ರಾಮದ ಯುವಕನೊಂದಿಗೆ ನಿಶ್ಚಯವಾಗಿತ್ತು. ಮಲ್ಲಪ್ಪ ಮಾಳವಾಡ ಸರಸ್ವತಿಯ ಗಂಡನ ಮನೆಗೂ ಹೋಗಿ ನಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ. ನಮ್ಮಿಬ್ಬರದ್ದೂ ಮದುವೆಯಾಗಿದೆ ಎಂದು ಹೇಳಿ ಬಂದಿದ್ದಾನೆ. ಇದರಿಂದ ಮನನೊಂದ ಸರಸ್ವತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಬಗ್ಗೆ ಸ್ವತಃ ಸರಸ್ವತಿಯ ತಾಯಿ ಗ್ಯಾನವ್ವ ಮಾತನಾಡಿದ್ದು, ಏನು ಹೇಳಿದ್ದಾರೆ ಕೇಳೋಣ ಬನ್ನಿ.
ಸರಸ್ವತಿ ಮತ್ತು ಮಲ್ಲಪ್ಪನ ಮಧ್ಯೆ ಪ್ರೀತಿ, ಪ್ರೇಮ ಏನೂ ಇರಲಿಲ್ಲ. ಆದರೂ ಮಲ್ಲಪ್ಪ ನನ್ನ ಮಗಳಿಗೆ ಕಿರುಕುಳ ಕೊಟ್ಟಿದ್ದಾನೆ. ಆಗಬೇಕಿದ್ದ ಮದುವೆಗೆ ಕಲ್ಲು ಹಾಕಿದ್ದಾನೆ. ಎಂದು ಸರಸ್ವತಿ ತಂದೆ ಸಿದ್ದಪ್ಪ ಆರೋಪಿಸಿದ್ದಾರೆ.
ಮಲ್ಲಪ್ಪ ಮಾಳವಾಡ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದಾನೆ. ವಿಷ ಕುಡಿದಿರುವ ಸರಸ್ವತಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕಿಮ್ಸ್‌ಗೆ ರವಾನೆ ಮಾಡಲಾಗಿದೆ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/03/2022 07:15 pm