ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಣ ನೀಡುವಂತೆ ಜೀವ ಬೆದರಿಕೆ: ಕಸಬಾಪೇಟ್ ಠಾಣೆಯಲ್ಲಿ ಪ್ರಕರಣ ದಾಖಲು

ಹುಬ್ಬಳ್ಳಿ: ಹಣದ ವಿಚಾರಕ್ಕೆ ವ್ಯಕ್ತಿ ಓರ್ವನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೇ, ಜೀವ ಬೆದರಿಕೆ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹೌದು,,, ಬಂಕಾಪೂರ ಚೌಕ ನಿವಾಸಿ ಇಮ್ತಿಯಾಜ್ ವಿ. ಎಂಬಾತ ಹಲ್ಲೆಗೊಳಗಾದವರು. ಹಳೇ ಹುಬ್ಬಳ್ಳಿಯ ಚನ್ನಪೇಟ ಸಂಬಂಧಿಕರ ಮನೆಯಲ್ಲಿ ಮಧ್ಯಾಹ್ನ ಮದ್ಯ ಸೇವನೆ ಮಾಡುತ್ತ ಕುಳಿತಾಗ ತಾಜಾವುದ್ದಿನ್ ಮತ್ತು ಅವನ ಸಹೋದರ ಮೈನುದ್ದಿನ್ ಬಂದು ನಮ್ಮ ಅಣ್ಣ ಹುಚ್ಚ ಇದ್ದಾನೆ ಅವನೊಂದಿಗೆ ಜೂಜಾಟವಾಡಿ ಹಣ ಪಡೆದಿರುವೆ. ಅದನ್ನು ಮರಳಿ ನೀಡು ಎಂದು ಅವಾಚ್ಯ ಶಬ್ದಗಳಿಂದ ಬೈದಾಡಿದ್ದಾನೆ. ಹಣ ಕೊಡುವರೆಗೂ ನಿನ್ನ ಬೈಕ್ ನನ್ನ ಹತ್ತಿರವಿರಲಿ ಎಂದು ಬೈಕ್ ಕಸಿದುಕೊಂಡು ಹಣ ನೀಡದೆ ಹೋದರೆ ಜೀವ ತೆಗೆಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

15/03/2022 10:40 am

Cinque Terre

40.98 K

Cinque Terre

2

ಸಂಬಂಧಿತ ಸುದ್ದಿ