ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆರ್‌ಬಿಎಲ್ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನ: ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳನ ಕೃತ್ಯ ಸೆರೆ

ನೆಹರು ಮೈದಾನದ ಬಳಿ ಕೃಷ್ಣಭವನದ ಪಕ್ಕದಲ್ಲಿರುವ ಆರ್‌ಬಿಎಲ್ ಬ್ಯಾಂಕ್‌ನ ಎಟಿಎಂನಲ್ಲಿ ವ್ಯಕ್ತಿಯೊಬ್ಬ ತಡರಾತ್ರಿ ರಾತ್ರಿ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿರುವ ಘಟನೆ ನಡೆದಿದೆ.

ಗ್ರಾಹಕರ ಸೋಗಿನಲ್ಲಿ ಅಪರಿಚಿತನೊಬ್ಬ ತಡರಾತ್ರಿ ಎಟಿಎಂಗೆ ನುಗ್ಗಿದ. ಕಾರ್ಡ್ ಒಂದನ್ನು ಹಾಕಿ ಹಣ ಡ್ರಾ ಮಾಡಲು ಯತ್ನಿಸಿದ. ನಂತರ ಎಟಿಎಂ ಮೆಷಿನ್ ಹಿಂದೆ ಇರುವ ಬಾಗಿಲನ್ನು ಕೈಯಿಂದ ಗುದ್ದಿ ತೆಗೆದಿದ್ದಾನೆ. ಒಳಗೆ ಹೋಗಿ ಸೀಕ್ರೆಟ್‌ ನಂಬರ್‌ ಹಾಕಿ ಎಟಿಎಂ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಇದ್ಯಾವುದೂ ಸಾಧ್ಯವಾಗದಿದ್ದಾಗ ಬರಿಗೈಲಿ ವಾಪಸಾಗಿದ್ದಾನೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳನ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Edited By :
Kshetra Samachara

Kshetra Samachara

12/03/2022 02:53 pm

Cinque Terre

49.32 K

Cinque Terre

0

ಸಂಬಂಧಿತ ಸುದ್ದಿ