ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗಂಡ, ಹೆಂಡತಿ ಜಗಳ ಸಾವಿನಲ್ಲಿ ಅಂತ್ಯ!; ಇಬ್ಬರು ಮಕ್ಕಳು ಅನಾಥ

ಧಾರವಾಡ: ʼಗಂಡ- ಹೆಂಡಿರ ಜಗಳ ಉಂಡು ಮಲಗೋ ತನಕʼ ಎಂಬ ಮಾತಿದೆ. ಆದರೆ, ಇದಕ್ಕೆ ತದ್ವಿರುದ್ಧವಾದ ಘಟನೆ ಧಾರವಾಡದಲ್ಲಿ ನಡೆದಿದ್ದು, ಇಡೀ ಗಣೇಶನಗರ ಅಕ್ಷರಶಃ ಬೆಚ್ಚಿ ಬಿದ್ದಿದೆ.

ಹೀಗೆ ರಕ್ತದ ಮಡುವಿನಲ್ಲಿ ಬಿದ್ದ ಗೃಹಿಣಿ ಹೆಸರು ಮನೀಷಾ. ಪಕ್ಕದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರುವ ಆಕೆಯ ಗಂಡ ಚಟ್ಟು ಗದಗವಾಲೆ. ಈ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳು. ಆದರೆ, ಈ ಸುಖ ಸಂಸಾರಕ್ಕೆ ಅಡ್ಡಿಯಾಗಿದ್ದು, ಚಟ್ಟುಗಿದ್ದ ವಿಪರೀತ ಕುಡಿತದ ಚಟ.

ಇದರಿಂದ ಗಂಡ- ಹೆಂಡಿರ ಮಧ್ಯೆ ಪ್ರತಿನಿತ್ಯ ಜಗಳ ಆಗುತ್ತಿತ್ತು. ಮನೀಷಾ ಮಕ್ಕಳ ಮುಖ ನೋಡಿ ತಾಳ್ಮೆಯಿಂದಲೇ ಸಂಸಾರ ದೂಡುತ್ತಿದ್ದಳು. ಗುರುವಾರ ರಾತ್ರಿ ಕೂಡ ಪತಿ-ಪತ್ನಿ ಮಧ್ಯೆ ಜಗಳ ನಡೆದಿದೆ. ಆದರೆ, ಜಗಳ ವಿಕೋಪಕ್ಕೆ ಹೋಗಿದ್ದರಿಂದ ಚಟ್ಟು, ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅದೃಷ್ಟವಶಾತ್ ಇಬ್ಬರು ಮಕ್ಕಳು ಬೇರೆ ಮನೆಯಲ್ಲಿದ್ದರಿಂದ ಬದುಕುಳಿದಿವೆ.

ಕೇಳಿದ್ರಲ್ಲ... ದಿನಂಪ್ರತಿ ಹೆಂಡ ಕುಡಿದು ಬರುತ್ತಿದ್ದ ಚಟ್ಟು, ತಾನೊಬ್ಬನೇ ಚಟ್ಟಕ್ಕೇರದೇ ಜೊತೆಗೆ ಪತ್ನಿಯನ್ನೂ ಹತ್ಯೆ ಮಾಡಿದ್ದಾನೆ. ಮಕ್ಕಳಿಗೆ ಒಳ್ಳೆಯ ತಂದೆಯಾಗದೆ, ಹೆಂಡತಿಗೆ ಒಳ್ಳೆಯ ಪತಿಯಾಗದೇ ಚಟ್ಟು, ಕೆಟ್ಟ ಚಟಕ್ಕೆ ಬಿದ್ದು, ವಿವೇಕ ಕಳೆದುಕೊಂಡು ಕೊನೆಗೆ ತನ್ನ ಮಕ್ಕಳನ್ನು ಅನಾಥವಾಗಿಸಿದ್ದಾನೆ. ಈ ಬಗ್ಗೆ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೇಳಿದ್ರಲ್ಲ. ದಿನಂಪ್ರತಿ ಹೆಂಡ ಕುಡಿದು ಬರುತ್ತಿದ್ದ ಚಟ್ಟು ತಾನೊಬ್ಬನೇ ಚಟ್ಟಕ್ಕೇರದೇ ಜೊತೆಗೆ ಪತ್ನಿಯನ್ನೂ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮಕ್ಕಳಿಗೆ ಒಳ್ಳೆಯ ತಂದೆಯಾಗದೆ, ಹೆಂಡತಿಗೆ ಒಳ್ಳೆಯ ಪತಿಯಾಗದೇ ಚಟ್ಟು ಕೆಟ್ಟ ಚಟಕ್ಕೆ ಬಿದ್ದು, ಇಂತದೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ತನ್ನ ಮಕ್ಕಳನ್ನು ಅನಾಥವಾಗಿ ಮಾಡಿಹೋಗಿದ್ದಾನೆ. ಸದ್ಯ ಈ ಸಂಬಂಧ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

11/03/2022 02:50 pm

Cinque Terre

89.13 K

Cinque Terre

36

ಸಂಬಂಧಿತ ಸುದ್ದಿ