ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪಡಿತರ ಅಕ್ಕಿಗೆ ಕನ್ನ ಹಾಕಿದ್ದ ಖದೀಮರು ಅರೆಸ್ಟ್

ಅಣ್ಣಿಗೇರಿ: ಸರ್ಕಾರದಿಂದ ಪೂರೈಕೆಯಾಗುವ ಉಚಿತ ಅಕ್ಕಿಯನ್ನು ಬೇರೆ ಬೇರೆ ಕಡೆ ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆ ಮಾರಲು ಯತ್ನಿಸಿದ್ದ ಖದೀಮರನ್ನು ಪಟ್ಟಣದ ಬಂಗಾರಪ್ಪ ಬಡಾವಣೆಯ ಸಮೀಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬರೋಬ್ಬರಿ 7.60 ಲಕ್ಷ ರೂ. ಮೌಲ್ಯದ 450 ಪಡಿತರ ಅಕ್ಕಿ ಚೀಲಗಳು, ಲಾರಿ, ಬುಲೋರೋ ಗೂಡ್ಸ್ ವಾಹನ ಮತ್ತು ಮಿನಿ ಗೋಡ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ಖದೀಮರು ಪಡಿತರ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಬೇರೆ ಕಡೆ ಮಾರಾಟ ಮಾಡುವ ಸಲುವಾಗಿ ಗಾಡಿಗಳಲ್ಲಿ ತುಂಬುವಾಗ 112 ಪೊಲೀಸ್ ವಾಹನಕ್ಕೆ ಕರೆ ಬಂದಿತ್ತು. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಡಿಯನ್ನು ವಶಪಡಿಸಿಕೊಂಡಿರುತ್ತಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮೂರು ಜನ ಖದೀಮರನ್ನು ಪೊಲೀಸರು ಈಗಾಗಲೇ ಬಂಧಿಸಿರುತ್ತಾರೆ. ಘಟನಾ ಸ್ಥಳಕ್ಕೆ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ಲಾಲಸಾಬ್ ಜೂಲಕಟ್ಟಿ ಭೇಟಿ ನೀಡಿ ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ.

Edited By : Manjunath H D
Kshetra Samachara

Kshetra Samachara

09/03/2022 06:28 pm

Cinque Terre

30.41 K

Cinque Terre

0

ಸಂಬಂಧಿತ ಸುದ್ದಿ