ಧಾರವಾಡ: ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿಗೆ ಗೇಟ್ ತಾಗಿ ಸಾವನ್ನಪ್ಪಿರುವ ಘಟನೆ ಧಾರವಾಡದ ಪೆಂಡಾರ್ ಗಲ್ಲಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಪೆಂಡಾರ್ ಗಲ್ಲಿಯಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿತ್ತು. ಈ ವೇಳೆ ಊಟದ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಈ ಜಗಳ ಬಿಡಿಸಲು ಹೋದ ಸಾದಿಕ್ ಬಿಡ್ನಾಳ ಎಂಬ ವ್ಯಕ್ತಿಯು ತಳ್ಳಾಟ, ನೂಕಾಟದಲ್ಲಿ ಸಿಲುಕಿದ್ದರಿಂದ ಆತನ ತಲೆಗೆ ಗೇಟ್ ಬಡಿದು ಸಾವನ್ನಪ್ಪಿದ್ದಾನೆ.
ರಿಜ್ವಾನ್ ಎಂಬಾತ ಸಾದಿಕ್‌ನನ್ನು ತಳ್ಳಿದ್ದರಿಂದ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿಯೇ ಸಾದಿಕ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ, ಆರೋಪಿ ರಿಜ್ವಾನ್‌ನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
Kshetra Samachara
09/03/2022 11:26 am