ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗರುಡ ಯುಟ್ಯೂಬ್ ಚಾನಲ್ ಪತ್ರಕರ್ತ ಕೃಷ್ಣಮೂರ್ತಿ ಅರೆಸ್ಟ್

ಧಾರವಾಡ: ನೊಂದ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗರುಡ ಎಂಬ ಹೆಸರಿನ ಯುಟ್ಯೂಬ್ ಚಾನೆಲ್ ಪತ್ರಕರ್ತ ಕೃಷ್ಣಮೂರ್ತಿ ಕುಲಕರ್ಣಿ ಎಂಬುವವರನ್ನು ಇದೀಗ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ತಾಲೂಕಿನ ಸೋಮಾಪೂರ ಗ್ರಾಮದ ಮಹಿಳೆ ಮೇಲೆ ಕೃಷ್ಣಮೂರ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ದೌರ್ಜನ್ಯಕ್ಕೊಳಗಾದ ಮಹಿಳೆಯೇ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ತನ್ನ ಗಂಡನ ಕಿರುಕುಳದಿಂದ ಬೇಸತ್ತು ಪೊಲೀಸ್ ಠಾಣೆಗೆ ಬಂದಿದ್ದ ಆ ಮಹಿಳೆಯು ತನಗೆ ನ್ಯಾಯ ಕೊಡಿಸುವಂತೆ ಗರುಡ ಯುಟ್ಯೂಬ್ ಚಾನೆಲ್‌ಗೂ ಮೊರೆ ಹೋಗಿದ್ದಳು. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಕೃಷ್ಣಮೂರ್ತಿ ತನ್ನ ಕೃಷ್ಣ ಲೀಲೆ ತೋರಿಸಿದ್ದಾನೆ. ಬನ್ನಿ ಹಾಗಾದ್ರೆ ಏನೆಲ್ಲ ನಡೆಯಿತು ಅನ್ನೋದನ್ನ ಸ್ವತಃ ನೊಂದ ಮಹಿಳೆಯೇ ಹೇಳುತ್ತಾಳೆ ಕೇಳೋಣ.

ಕೇಳಿದ್ರಲ್ಲ ಆಕೆಯ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಕೃಷ್ಣಮೂರ್ತಿ ಮಹಾಶಯ. ಆಕೆಯ ವಡವೆಯನ್ನೂ ಒತ್ತೆ ಇಟ್ಟು ಹಣ ಕೂಡ ಪಡೆದುಕೊಂಡಿದ್ದಾನಂತೆ. ಇದೀಗ ಆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

Edited By : Manjunath H D
Kshetra Samachara

Kshetra Samachara

05/03/2022 05:39 pm

Cinque Terre

107.43 K

Cinque Terre

42

ಸಂಬಂಧಿತ ಸುದ್ದಿ