ಧಾರವಾಡ: ಕಟಾವು ಮಾಡಿ ಒಟ್ಟಲಾಗಿದ್ದ ಸೋಯಾಬೀನ್ ಬಣವೆಗಳಿಗೆ ಕಿಡಿಗೇಡಿಗಳು ಇಂದು ಶುಕ್ರವಾರ ನಸುಕಿನ ಜಾವ ಬೆಂಕಿ ಹಚ್ಚಿದ್ದಾರೆ. ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಸವರಾಜ್ ಮಟಗೊಡ್ಲಿ, ಶಿವಪ್ಪ ಮಟಗೊಡ್ಲಿ, ಈರಪ್ಪ ಮಟಗೊಡ್ಲಿ ಎಂಬ ಮೂವರು ಸಹೋದರರಿಗೆ ಸೇರಿದ ಈ ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಒಟ್ಟು 10 ಎಕರೆಯಲ್ಲಿ ಸೋಯಾಬೀನ್ ಬೆಳೆದಿದ್ದ ಸಹೋದರರು ಪ್ರತಿ ಎಕರೆಗೆ ಸುಮಾರು 15ಸಾವಿರಕ್ಕೂ ಅಧಿಕ ಖರ್ಚು ಮಾಡಿದ್ದರು. ಕಿಡಿಗೇಡಿಗಳ ಈ ಕೃತ್ಯದಿಂದ ಸುಮಾರು 5 ಲಕ್ಷ ರೂಪಾಯಿ ನಷ್ಟವಾಗಿದ್ದು ಮಟಗೊಡ್ಲಿ ಸಹೋದರರು ಕಂಗಾಲಾಗಿದ್ದಾರೆ.
Kshetra Samachara
04/03/2022 11:51 am