ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಲೆಗೆ ಬಿದ್ದ ಜಾನುವಾರು ಕಳ್ಳರು: ಗರಗ ಠಾಣೆ ಪೊಲೀಸರ ಭರ್ಜರಿ ಬೇಟೆ

ಧಾರವಾಡ: ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಗರಗ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ತಾಲೂಕಿನ ಗರಗ ಗ್ರಾಮದ ಮಡಿವಾಳಪ್ಪ ನಿಂಗಪ್ಪ ಮಲ್ಲೇದಿ, ಮಕ್ತುಂಸಾವ್ ಹುಸೇನಸಾಬ್ ಶೇಖ್, ನಿಂಗಪ್ಪ ಮಡಿವಾಳಪ್ಪ ವಾಲೀಕಾರ, ಮಹಾಂತೇಶ ನಿಂಗಪ್ಪ ಹಡಗಲಿ ಮತ್ತು ಧಾರವಾಡದ ರಮಜಾನಸಾಬ್ ಶರೀಫಸಾಬ್ ಬೇಪಾರಿ ಎಂಬುವರೇ ಬಂಧಿತ ಆರೋಪಿಗಳು.

ಬಂಧಿತರಿಂದ 2 ಲಕ್ಷ 60 ಸಾವಿರ ರೂಪಾಯಿ ನಗದು ಮತ್ತು ದನಗಳ ಕಳ್ಳತನಕ್ಕೆ ಬಳಸುತ್ತಿದ್ದ 2 ಲಕ್ಷ ಮೌಲ್ಯದ ಒಂದು ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಪಿಐ ಎಸ್.ಸಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಕಿರಣ ಮೋಹಿತೆ, ಎಎಸ್‌ಐ ಸಾತಪುತೆ, ಎಚ್.ಎಂ.ನರಗುಂದ, ಎಸ್.ಎಫ್.ತಿಮ್ಮಾಪುರ, ವೈ.ಜಿ.ಶಿವಮ್ಮನವರ, ಸಂತೋಷ್ ಜವಳಿ, ಎ.ಬಿ.ಸೊರಟೂರ, ಎಸ್.ಎಫ್.ಕಟ್ಟಿಮನಿ, ಮಂಜು ಕೆರೂರ ಅವರನ್ನೊಳಗೊಂಡ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಧಾರವಾಡ ತಾಲೂಕಿನ ವಿವಿಧೆಡೆ ಎತ್ತು, ಎಮ್ಮೆ ಮತ್ತು ಹಸುಗಳನ್ನು ಕಳ್ಳತನ ಮಾಡುವ ಕೃತ್ಯಗಳು ನಡೆಯುತ್ತಿದ್ದವು.

ಈ ಸಂಬಂಧ ರೈತರು ತೀವ್ರ ಆತಂಕಕ್ಕೊಳಗಾಗಿದ್ದರು.ಇದೀಗ ಕೆಲವು ಆರೋಪಿಗಳು ಬಲೆಗೆ ಬಿದ್ದಿದ್ದು, ಇನ್ನುಳಿದವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/03/2022 09:21 am

Cinque Terre

31.84 K

Cinque Terre

10

ಸಂಬಂಧಿತ ಸುದ್ದಿ