ಕಲಘಟಗಿ : ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ್ಯ ಮಂಜುನಾಥ್ ಕಂಪ್ಲಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಆಪಾಧಿತರಿಬ್ಬರಿಗೂ 3 ವರ್ಷ ಕಠಿಣ ಕಾರಾಗೃಹ, ಎರಡು ವರ್ಷ ಆರು ತಿಂಗಳು ಸರಳ ಸೆರೆವಾಸ ಸೇರಿ ಒಟ್ಟು ಐದು ವರ್ಷ ಆರು ತಿಂಗಳ ಜೈಲು ಶಿಕ್ಷೆಯನ್ನು ನ್ಯಾಯಾಧೀಶ ಎನ್ ಗಣೇಶ ರವರು ನೀಡಿದ್ದಾರೆ.
ಶಿಕ್ಷೆಯ ಜೊತೆಗೆ 9,500 ರೂಪಾಯಿಗಳ ದಂಡವನ್ನು ವಿಧಿಸಿರುವ ನ್ಯಾಯಾಧೀಶರು, ದಂಡವನ್ನು ಪಾವತಿಸಲು ವಿಫಲರಾದರೆ 14 ತಿಂಗಳು ಹೆಚ್ಚುವರಿಯಾಗಿ ಶಿಕ್ಷೆ ಅನುಭವಿಸಬೇಕು. ದಂಡದ ಸಂಪೂರ್ಣ ಮೊತ್ತವನ್ನು ಪರಿಹಾರವಾಗಿ ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
2019 ರಲ್ಲಿ ಆಪಾದಿತ ಗಣಪತಿ ಜೊತೆಗೂಡಿ ವಕೀಲ ಮಂಜುನಾಥ್ ಕಂಪ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅಸಭ್ಯ ವರ್ತನೆ ತೋರಿದ್ದ ಪ್ರಕರಣವು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮನಾಳ ಗ್ರಾಮದಲ್ಲಿ ದಾಖಲಾಗಿತ್ತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/02/2022 09:20 am