ಧಾರವಾಡ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೊಬ್ಬನಿಗೆ ರೈಲು ಬಡಿದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡದ ಕಲ್ಯಾಣನಗರದ ಬಳಿ ನಡೆದಿದೆ.
ಗಾಯಗೊಂಡ ಯುವಕನ ಹೆಸರು ತಿಳಿದು ಬಂದಿಲ್ಲ. ಆತ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಸಂಬಂಧ ವಿಜಯಪುರದಿಂದ ಧಾರವಾಡಕ್ಕೆ ಬಂದು ಕೋಚಿಂಗ್ ಪಡೆಯುತ್ತಿದ್ದ ಎಂದು ಗೊತ್ತಾಗಿದೆ.
ಕಲ್ಯಾಣನಗರದ ಬಳಿ ಹೋಗುವ ರೈಲಿನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಈ ಅವಾಂತರವಾಗಿದೆ ಎಂದು ಗೊತ್ತಾಗಿದೆ. ತೀವ್ರವಾಗಿ ಗಾಯಗೊಂಡ ಯುವಕನನ್ನು ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
23/02/2022 10:25 pm