ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅನುಮತಿ ಪಡೆಯದೇ ಸರ್ಕಾರಿ ಕಟ್ಟಡಗಳ ನಿರ್ಮಾಣ; ಯರಗುಪ್ಪಿ ಆರೋಪ

ನವಲಗುಂದ: ಪಟ್ಟಣದಲ್ಲಿನ ಕೆಲವು ಸರ್ಕಾರಿ ಕಟ್ಟಡಗಳು ಪುರಸಭೆಯಿಂದ ಅನುಮತಿ ಇಲ್ಲದೇ ನಿರ್ಮಾಣಗೊಂಡಿವೆ ಎಂದು ಉತ್ತರ ಕರ್ನಾಟಕ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಮಾಬುಸಾಬ ಯರಗುಪ್ಪಿ ಆರೋಪಿಸಿದ್ದಾರೆ.

ಪಟ್ಟಣದ ಹಲವಾರು ಸರ್ಕಾರಿ ಕಟ್ಟಡಗಳನ್ನು ಪುರಸಭೆಯಿಂದ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ನಿರ್ಮಿಸಿದ್ದಾರೆ. ಸಾರ್ವಜನಿಕರು ಮನೆ ಕಟ್ಟಬೇಕಾದರೆ ಪುರಸಭೆಯಿಂದ ಅನುಮತಿ ಪಡೆಯಬೇಕು. ಅನುಮತಿ ಸಿಕ್ಕಾಗ ಮನೆ ಕಟ್ಟಲು ಶುರು ಮಾಡಬೇಕು. ಇಲ್ಲದಿದ್ರೆ ಅಧಿಕೃತ ಮನೆಯನ್ನು ಅನಧಿಕೃತ ಮನೆಯನ್ನಾಗಿ ದಾಖಲೆಯಲ್ಲಿ ಬರೆಯುವುದಾಗಿ ಪುರಸಭೆಯ ಅಧಿಕಾರಿಗಳು ಬೆದರಿಸುತ್ತಾರೆ.

ಆದರೆ, ಇಂದು ತಮ್ಮದೇ ವ್ಯಾಪ್ತಿಯಲ್ಲಿ ಬರುವ ಹಾಗೂ ತಮ್ಮ ಕಚೇರಿ ಹತ್ತಿರದಲ್ಲೇ ಇರುವ ಸರ್ಕಾರಿ ಕಟ್ಟಡಗಳು ಅನುಮತಿ ಪಡೆಯದೇ ನಿರ್ಮಿಸಲಾಗಿದ್ದರೂ ಸಹ ಇದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವ ರೀತಿ ಪುರಸಭೆಯ ಅಧಿಕಾರಿಗಳು ಸುಮ್ಮನಿದ್ದಾರೆ.

ಇನ್ನು ಈ ವಿಷಯದಲ್ಲಿ ಉಳ್ಳವರಿಗೆ ಒಂದು ಕಾನೂನು ಬಡವರಿಗೆ ಒಂದು ಕಾನೂನು ಎನ್ನುವಂತಾಗಿ ಹೋಗಿದೆ. ಅನುಮತಿಯನ್ನು ಪಡೆಯದೇ ಎಲ್ಲ ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದರೂ ಸಹ ಯಾವೊಬ್ಬ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವಾಗದಿರುವುದು ವಿಪರ್ಯಾಸ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಬುಸಾಬ ಯರಗುಪ್ಪಿ ಆರೋಪಿಸಿದ್ದಾರೆ.

Edited By : Shivu K
Kshetra Samachara

Kshetra Samachara

23/02/2022 01:08 pm

Cinque Terre

34.26 K

Cinque Terre

1

ಸಂಬಂಧಿತ ಸುದ್ದಿ