ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡಲು ಸಾಗಿಸುತ್ತಿದ್ದವನನ್ನು ಗೋಕುಲ ರಸ್ತೆ ಪೊಲೀಸರು ಇಂಡಸ್ಟ್ರಿಯಲ್ ಏರಿಯಾ 1ನೇ ಗೇಟ್ ಸಮೀಪದ ಪವನ ಗೋದಾಮು ಹತ್ತಿರ ಬಂಧಿಸಿದ್ದು, ಆರೋಪಿಯಿಂದ 2,820 ರೂ. ಮೌಲ್ಯದ 282 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸೋನಿಯಾ ಗಾಂಧಿ ಪ್ಲಾಟ್‌ನ ರುಕ್ಮದೀನ್ ಗಡವಾಲೆ ಬಂಧಿತ ಆರೋಪಿ. ವಿವಿಧ ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ಮಂಜ್ಯಾ ಎಂಬಾತ ರುಕ್ಮದೀನ್‌ಗೆ ಕರೆ ಮಾಡಿ ಗಾಂಜಾ ಮಾರಲು ಪ್ರೇರೇಪಿಸಿ ಹಣ ಸಂಪಾದಿಸಲು ತಿಳಿಸಿದ್ದ. ಇದರಿಂದ ಪ್ರೇರಿತನಾದ ರುಕ್ಮದೀನ್ ಗಾಂಜಾ ಮಾರಾಟ ಮಾಡಲು ಆರಂಭಿಸಿದ್ದ. ಈ ವಿಷಯ ಇತ್ತೀಚೆಗೆ ಗೋಕುಲ ರಸ್ತೆ ಪೊಲೀಸರಿಗೆ ತಿಳಿದಿದ್ದು, ಆರೋಪಿಯನ್ನು ಸಾಕ್ಷಿ ಸಮೇತ ಹಿಡಿದಿದ್ದಾರೆ. ಈ ಕುರಿತು ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/02/2022 09:09 am