ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲಾರಿ ಡೋರ್ ಮುರಿದು 60 ಸಾವಿರ ರೂ. ಮೌಲ್ಯದ ಬಟ್ಟೆ ಬಂಡಲ್ ಕಳ್ಳತನ

ಹುಬ್ಬಳ್ಳಿ: ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಯೊಂದರ ಡೋರ್ ಲಾಕರ್ ಮುರಿದ ಕಳ್ಳರು 60 ಸಾವಿರ ರೂ. ಮೌಲ್ಯದ 6 ಬಟ್ಟೆ ಬಂಡಲ್ ಕದ್ದು ಪರಾರಿಯಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ವರೂರ ಗ್ರಾಮದ ಬಳಿ ನಡೆದಿದೆ.

ಆನಂದ ಜೋಶಿ ಎಂಬ ಚಾಲಕ ಕೆ.ಎ 63/ 4880 ಲಾರಿಯಲ್ಲಿ ಬಟ್ಟೆ ಬಂಡಲ್‌ಗಳನ್ನು ಸಾಗಿಸುತ್ತಿದ್ದರು. ಆನಂದ ಅವರು ವಿಶ್ರಾಂತಿಗಾಗಿ ವರೂರು ಗ್ರಾಮದ ಹತ್ತಿರ ನಿಲ್ಲಿಸಿದಾಗ ಯಾರೋ ಕಳ್ಳರು ಲಾರಿಯ ಡಬಲ್ ಡೋರ್ ಲಾಕರ್ ತೆಗೆದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

21/02/2022 08:56 am

Cinque Terre

23.18 K

Cinque Terre

0

ಸಂಬಂಧಿತ ಸುದ್ದಿ