ಕುಂದಗೋಳ: ಮಹಿಳೆಯೊಬ್ಬರನ್ನ ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಹೊರ ವಲಯದಲ್ಲಿ ನಡೆದಿದ್ದು, ವಿಷಯ ಇಂದು ಸಂಜೆ ಬೆಳಕಿಗೆ ಬಂದಿದೆ.
ಹತ್ಯೆಗೀಡಾದ ಮಹಿಳೆ ಕುರಿಗಾಹಿ ಎಂದು ಶಂಕಿಸಲಾಗಿದ್ದು, ಯಾರು ಹತ್ಯೆ ಮಾಡಿದ್ದಾರೆ? ಯಾಕೆ ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಸದ್ಯ ಮಹಿಳೆ ಹತ್ಯೆಯ ಸುತ್ತ ಅನುಮಾನದ ಹುತ್ತವೇ ಸೃಷ್ಟಿಯಾಗಿದೆ. ಈ ಹತ್ಯೆ ಬಗ್ಗೆ ಪೊಲೀಸ್ ತನಿಖೆ ಬಳಿಕವೇ ಸತ್ಯಾಂಶ ತಿಳಿಯಬೇಕಿದ್ದು, ಕುಂದಗೋಳ ಗ್ರಾಮೀಣ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
Kshetra Samachara
18/02/2022 09:19 pm