ಹುಬ್ಬಳ್ಳಿ: ಮೊಬೈಲ್ ನಲ್ಲಿ ಗೇಮ್ ಆಡಬೇಡ ಎಂದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಗೆ ಹಾಕಿರುವ ಘಟನೆ ಚೇತನ ವಿಹಾರ ವೆಂಕಟೇಶ ಕಾಲನಿ ಬೆಂಗೇರಿ ಹತ್ತಿರ ಅಂಗಡಿಯಲ್ಲಿ ನಡೆದಿದೆ.
ಮೊಮ್ಮದಗೌಸಶೇಖ ಶೇಖಸನದಿ ಎಂಬುವರು ಹಲ್ಲೆಗೊಳಗಾದವರು. ಇವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಮೊಬೈಲ್ ದಲ್ಲಿ ಆಟ ವಾಡಬೇಡ ಕೆಲಸ ಮಾಡು ಎಂದಿದಕ್ಕೆ ಕೋಪಗೊಂಡು ಅವರನ್ನು ಕಲ್ಲಿನಿಂದ ಮುಖಕ್ಕೆ ಮೂಗಿಗೆ ಹೊಡೆದು ಗಾಯಪಡಿಸಿದ್ದು, ಅವಾಚ್ಯಾ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/02/2022 08:34 am