ಹುಬ್ಬಳ್ಳಿ: ಈ ಊರಿನ ಜನಕ್ಕೆ ಈಗ ಭಯು ಶುರು ಆಗಿದೆ. ಈ ಭಯವನ್ನ ಹುಟ್ಟಿಸಿರೋದು ಬೇರೆ ಯಾರೋ ಅಲ್ಲ. ಅದು ಮಂಗಗಳು. ಮಂಗಳ ಕಾಟಕ್ಕೆ ಇಡೀ ಊರಿಗೆ ಊರೇ ಭಯಪಟ್ಟಿದೆ. ಹೌದು. ಈ ಗ್ರಾಮದ ಹೆಸರು ಛಬ್ಬಿ. ಹುಬ್ಬಳ್ಳಿ ತಾಲೂಕಿನ ಗ್ರಾಮ. ಇಲ್ಲಿ ಓಡಾಡುವ ಮಹಿಳೆಯರಿಗೆ ಹಾಗೂ ಮಕ್ಕಳ ಮೇಲೆ ಮಂಗಗಳು ದಾಳಿ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
ನಿಜ, ಛಬ್ಬಿ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಮಂಗಗಳು ತೀವ್ರ ಹಾವಳಿ ಮಾಡುತ್ತಿವೆ. 25 ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದು, ಮಹಿಳೆಯರು ಮಧ್ಯಾಹ್ನದ ಹೊತ್ತಿನಲ್ಲಿ ಬೀದಿ ಬರಲು ಹೆದರುವಂತಾಗಿದೆ. ಮಂಗನ ಹಾವಳಿ ದಿನೆ ದಿನೇ ಹೆಚ್ಚುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮಾಹಿತಿ ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲವಂತೆ, ಕೂಡಲೆ ಅರಣ್ಯ ಅಧಿಕಾರಿಗಳು ಮಂಗಗಳನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
Kshetra Samachara
12/02/2022 04:11 pm