ಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಯುವಕನೊಬ್ಬ ಕಾಲೇಜು ಡ್ರೆಸ್ ಧರಿಸಿಕೊಂಡು ಬಂದು, ಸುಮಾರು 15,000 ರೂಪಾಯಿ ಮೌಲ್ಯದ ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ನಗರದ ಕಮರಿಪೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಮೂರುಸಾವಿರ ಮಠದ ಅಂಚಟಗೇರಿ ಓಣಿಯ ಶ್ರೀ ಬಾಲಾಜಿ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಕಳ್ಳನ ಈ ಕರಾಮತ್ತು ಈಗ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕಳ್ಳನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
Kshetra Samachara
12/02/2022 02:45 pm