ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಒಂಟಿ ಮಹಿಳೆ ಮೇಲೆ ರೌಡಿಗಳಿಂದ ಹಲ್ಲೆ; ದೂರು ನೀಡಿದ್ರೂ ಪೊಲೀಸರು ಸೈಲೆಂಟ್

ಪಬ್ಲಿಕ್ ನೆಕ್ಸ್ಟ್- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಸುಂದರ ಸಂಸಾರ ನಡೆಸುತ್ತಿದ್ದ ಕುಟುಂಬದ ಮೇಲೆ ರೌಡಿಗಳ ಕಣ್ಣು ಬಿದ್ದಿದೆ. ಏಕಾಏಕಿ ದಾಳಿ ನಡೆಸಿ ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಈ ರೌಡಿಗಳ ಈ ಅಟ್ಟಹಾಸಕ್ಕೆ ಕಾರಣವೇನು ಗೊತ್ತಾ. ಈ ಸ್ಟೋರಿ ನೋಡಿ..

ಹೀಗೆ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಕಣ್ಣಿರು ಹಾಕುತ್ತಾ ನಿಂತಿರುವ ಇವರ ಹೆಸರು ಲಕ್ಷ್ಮಿ . ತಾನಾಯ್ತು ತನ್ನ ಮನೆಯಾಯ್ತು ಅಂತ ಸಂಸಾರ ನಡೆಸುತ್ತಿದ್ದ ಲಕ್ಷ್ಮಿ ಅವರು ಕುಟುಂಬಕ್ಕೆ ಆ ಒಂದು ಗ್ಯಾಂಗ್ ನಿರಂತರ ಕಾಟ ನೀಡುತ್ತಿದೆಯಂತೆ. ಸುಮಾರು ವರ್ಷಗಳಿಂದ ಲಕ್ಷ್ಮಿ ಪತಿ ಹಾಗೂ ಸ್ನೇಹಿತರ ಮಧ್ಯ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಕಿರಿಕ್ ಆಗುತ್ತಲೇ ಇತ್ತು. ಜಾಗದ ವಿಚಾರ ಕೋರ್ಟ್‌ನಲ್ಲಿದ್ದು ಇದರ ಮಧ್ಯೆಯೇ ಇದೀಗ ಲಕ್ಷ್ಮಿ ಅವರಿದ್ದ ಹುಬ್ಬಳ್ಳಿಯ ಲಿಂಗರಾಜ ನಗರಲ್ಲಿರುವ ಅಪಾರ್ಟ್‌ಮೆಂಟ್‌ಗೆ ಏಕಾಏಕಿ ನುಗ್ಗಿ ದಾಂಧಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಬಾಲಕೃಷ್ಣ ನಾಯಕ, ಶಕ್ತಿರಾಜ ದಾಂಡೇಲಿ, ರಾಹುಲ್ ಪ್ರಭು, ಸೇರಿದಂತೆ ಹತ್ತಕ್ಕೂ ಹೆಚ್ಚು ಯುವಕರು ಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅತ್ಯಾಚಾರಕ್ಕೂ ಯತ್ನಿಸಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಲಕ್ಷ್ಮಿ ಗಂಡ ಮನೆಯಲ್ಲಿ ಇಲ್ಲದಿರುವುದನ್ನೇ ಹೊಂಚು ಹಾಕಿ ಕಾದಿದ್ದ ಪುಂಡರು ಹಾಡು ಹಗಲೇ ಹಲ್ಲೆಗೆ ಯತ್ನಿಸಿದ್ದು ಸದ್ಯ ಮನೆಯವರನ್ನ ಬೆಚ್ಚಿಸಿದೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಬರದೆ ಹೋಗಿದ್ದರೆ ನನ್ನ ಜೀವವನ್ನೇ ತೆಗೆಯಲು ಹಿಂಜರಿಯುತ್ತಿರಲಿಲ್ಲ ಎಂದು ಲಕ್ಷ್ಮಿ ಘಟನೆ ಬಗ್ಗೆ ಕಣ್ಣಿರು ಹಾಕಿದ್ದಾರೆ. ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ನಮಗೆ ಪೊಲೀಸರು ರಕ್ಷಣೆ ಮಾಡುವಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ. ಒಂಟಿ ಮಹಿಳೆ ಮೇಲೆ ಈ ರೀತಿ ಕೃತ್ಯ ಎಸಗೋದು ಎಷ್ಟು ಸರಿ ಅನ್ನೋದು ಜನರ ಪ್ರಶ್ನೆಯಾಗಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/02/2022 03:53 pm

Cinque Terre

91.08 K

Cinque Terre

10

ಸಂಬಂಧಿತ ಸುದ್ದಿ